ಮೋದಿ ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ ಆತ್ಮಹತ್ಯೆ: ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ

ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗದಿದ್ದರೆ ಅಯೋಧ್ಯೆಯ ರಾಮ ಮಂದಿರ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ....
ನರೇಂದ್ರ ಮೋದಿ
ನರೇಂದ್ರ ಮೋದಿ
ಲಖನೌ: ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗದಿದ್ದರೆ ಅಯೋಧ್ಯೆಯ ರಾಮ ಮಂದಿರ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್‍ ರಿಜ್ವಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲಿಸುತ್ತಿರುವುದರಿಂದ ಕೆಲ ಮತಾಂಧ ಮುಸ್ಲೀಮರಿಂದ ತಮಗೆ ಜೀವ ಬೆದರಿಕೆಗಳು ಬರುತ್ತಿದ್ದು, ಮೋದಿ ಸೋತರೆ, ತಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿ ಇಲ್ಲ ಎಂದು ರಿಜ್ವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
'ಧರ್ಮಕ್ಕೂ ಮೀರಿ ರಾಷ್ಟ್ರೀಯತೆಯನ್ನು ಸದಾ ಬೆಂಬಲಿಸುತ್ತೇನೆ. ಮೋದಿ ಬಿಟ್ಟು ಯಾರೊಬ್ಬರು ಪ್ರಧಾನಿಯಾದರೂ ರಾಮ ಮಂದಿರ ದ್ವಾರದ ಬಳಿ ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ' ಎಂದು ಅವರು ಹೇಳಿದ್ದಾರೆ. 
ರಾಷ್ಟ್ರೀಯತೆ ಬಗ್ಗೆ ಮಾತನಾಡಿದಾಗ ಮತಾಂಧರು ತಮಗೆ ಬೆದರಿಕೆ ಒಡ್ಡುತ್ತಾರೆ. ಮೋದಿ ಅಧಿಕಾರದಿಂದ ಇಳಿದರೆ ನಿನ್ನನ್ನು ಎರಡು ತುಂಡು ಮಾಡುತ್ತೇವೆ ಎಂದು ಒಮ್ಮೆ ಬೆದರಿಕೆ ಹಾಕಿದ್ದಾರೆ. ದೇಶ ವಿರೋಧಿ ಶಕ್ತಿಗಳಿಂದ ಮತ್ತು ಭಯೋತ್ಪಾದಕರಿಂದ ಎರಡು ತುಂಡಾಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎನಿಸಿದೆ ಎಂದು ರಿಜ್ವಿ ಹೇಳಿದ್ದಾರೆ.  
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಯೋಧ್ಯೆಯಲ್ಲಿ ವಿವಾದಾತ್ಮಕ ಜಾಗದಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವುದರ ಮೂಲಕ ರಿಜ್ವಿ ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com