ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣೆಯಿಂದ ಹಿಂದೆ ಸರಿದ ಮಹಿಳೆ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದ ಮಹಿಳೆ...
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದ ಮಹಿಳೆ ವಿಚಾರಣೆಯಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ವಿಚಾರಣೆಯಿಂದ  ನ್ಯಾಯ ದೊರೆಯುತ್ತದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯಾಯಮೂರ್ತಿ ಎಸ್. ಎ. ಬೊಡ್ಡೆ ನೇತೃತ್ವದ  ನ್ಯಾಯಪೀಠದ ಮುಂದೆ ಏಕಾಂಕಿಯಾಗಿ ವಿಚಾರಣೆ ಎದುರಿಸಬೇಕಾಗಿದೆ. ಅಲ್ಲದೇ  ಈ ಪ್ರಕ್ರಿಯೆಯಲ್ಲಿ ತಮ್ಮ ಪರ ವಕೀಲರು ಪಾಲ್ಗೊಳ್ಳಲು ಅವಕಾಶ ಇಲ್ಲದಿರುವುದರಿಂದ ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿಯಾಗಿರುವ ದೂರುದಾರ ಮಹಿಳೆ ತಿಳಿಸಿದ್ದಾರೆ.

ಬೊಡ್ಡೆ ನೇತೃತ್ವದ ವಿಚಾರಣಾ ಸಮಿತಿಯಲ್ಲಿ ತಮ್ಮಗೆ ಯಾರ ಬೆಂಬಲವೂ ಇಲ್ಲದೆ ಭಯದ ಸ್ಥಿತಿಯಲ್ಲಿ ನ್ಯಾಯಸಮ್ಮತ ವಲ್ಲದ ರೀತಿಯಲ್ಲಿ ವಿಚಾರಣೆ ಎದುರಿಸಬೇಕಾಗಿದ್ದರಿಂದ ತಾನೂ ವಿಚಾರಣೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿ ಹೇಳಿಕೆಯಲ್ಲಿ ಆ ಮಹಿಳೆ ಹೇಳಿದ್ದಾರೆ.
ಏಪ್ರಿಲ್ 20 ರಂದು ಸಿಜೆಐ ವಿರುದ್ಧ ಮಹಿಳೆಯ ಆರೋಪ ನಾಲ್ಕು ವೆಬ್ ಪೋರ್ಟಲ್  ಮೂಲಕ ಬೆಳಕಿಗೆ ಬಂದಿತ್ತು.ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್ ಅವರ ದೆಹಲಿಯಲ್ಲಿನ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಲೈಂಗಿಕ ಕಿರುಕುಳ ಆರೋಪದ ಬಗ್ಗೆಗಿನ ಅಫಿಡವಿಟ್ ನ್ನು ಉನ್ನತ ನ್ಯಾಯಾಲಯದ 22 ಜಡ್ಜ್ ಗಳಿಗೆ ಕಳುಹಿಸಿದ್ದರು. ಇದರ ಆಧಾರದ ಮೇಲೆ ನ್ಯೂಸ್ ಪೋರ್ಟಲ್ ವೊಂದು ಸುದ್ದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com