ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ

ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡಾವಣೆ ಮಾಡಿದ ಚಂದ್ರಯಾನ-2 ನೌಕೆಯ...
ಇಸ್ರೋ ಟ್ವೀಟ್ ಮಾಡಿರುವ ಚಿತ್ರ
ಇಸ್ರೋ ಟ್ವೀಟ್ ಮಾಡಿರುವ ಚಿತ್ರ
ಬೆಂಗಳೂರು: ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡಾವಣೆ ಮಾಡಿದ ಚಂದ್ರಯಾನ-2 ನೌಕೆಯ ಕಕ್ಷೆಯನ್ನು 4ನೇ ಬಾರಿ ಎತ್ತರಿಸುವ ಕಾರ್ಯ ಶುಕ್ರವಾರ ಯಶಸ್ವಿಯಾಗಿದೆ.
ಇಂದು ಮಧ್ಯಾಹ್ನ 3.27ಕ್ಕೆ ಈ ಕಾರ್ಯಾಚರಣೆ ನಡೆಸಲಾಗಿದೆ. ನೌಕೆಯಲ್ಲಿನ ಎಂಜಿನ್ ಅನ್ನು ಚಾಲೂ ಮಾಡಿ ಈ ಕಾರ್ಯಾಚರಣೆ ನಡೆಸಲಾಗಿದೆ. 4ನೇ ಬಾರಿ ಕಕ್ಷೆಗೇರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
ನೌಕೆಯ ಹಾದಿಗೆ ಕಣ್ಗಾವಲು ಇಡಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಇಸ್ರೊ ಹೇಳಿದೆ. ಈ ಕುರಿತ ಫೋಟೋ, ಮಾಹಿತಿಯನ್ನು ಇಸ್ರೋ ಟ್ವೀಟ್‌ ಮಾಡಿದೆ.
ಸರಿ ಸುಮಾರು 4 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲೆ ಲ್ಯಾಂಡರ್‌, ರೋವರ್‌ ಮತ್ತು ಆರ್ಬಿಟರ್‌ ಒಳಗೊಂಡ 3,850 ಕಿ.ಜಿ ತೂಕದ ಚಂದ್ರಯಾನ-2 ನೌಕೆಯನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಒಟ್ಟು 15 ಬಾರಿ ಎತ್ತರಿಸುವ, ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಸರಿಪಡಿಸುವ ಕಾರ್ಯವನ್ನು ಇಸ್ರೋ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com