ಆರ್ಟಿಕಲ್ 370 ರದ್ದು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಸಂಸದನ ಎಡವಟ್ಟು, ಸೋನಿಯಾ ಗಾಂಧಿ ಸಿಟ್ಟು!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ(ಆರ್ಟಿಕಲ್ 370)ವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಬರದಲ್ಲಿ ಕಾಂಗ್ರೆಸ್...
ಅಧೀರ್ ರಂಜನ್-ಸೋನಿಯಾ ಗಾಂಧಿ
ಅಧೀರ್ ರಂಜನ್-ಸೋನಿಯಾ ಗಾಂಧಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ(ಆರ್ಟಿಕಲ್ 370)ವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಈ ಬಗ್ಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಿಟ್ಟಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇಂದು ಲೋಕಸಭೆಯಲ್ಲಿ ಅಮಿತ್ ಶಾ ಮಂಡನೆ ಮಾಡುವ ವೇಳೆ ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಭಾ ನಾಯಕ ರಂಜನ್ ಚೌಧರಿ ಅವರು, ರಾತ್ರೋರಾತ್ರಿ ವಿಶೇಷಾಧಿಕಾರ ರದ್ದು ಮಾಡಿದ್ದೀರಾ. ಅಸಾಂವಿಧಾನಿಕವಾಗಿ ವಿಶೇಷಾಧಿಕಾರ ರದ್ದು ಮಾಡಿದ್ದೇಕೆ? 1948ರಿಂದ ಈ ವಿಚಾರ ವಿಶ್ವಸಂಸ್ಥೆಯಲ್ಲಿದೆ. ಹೀಗಾಗಿ ಇದು ಆಂತರಿಕ ವಿಚಾರ ಹೇಗಾಗುತ್ತೆ ಅಂತ ಪ್ರಶ್ನಿಸಿದ್ದರು. 
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಅಮಿತ್ ಶಾ, ಸಮಗ್ರ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಜಮ್ಮು ಒಳಗೆಯೇ ಪಾಕ್ ಆಕ್ರಮಿತ ಕಾಶ್ಮೀರ ಇದೆ. ಜಮ್ಮು ಕಾಶ್ಮೀರ ಅಂತ ಹೇಳುವಾಗ ಪಿಒಕೆ ಭಾರತದ ಅಂಗ ಅಂತ ಹೇಳಲ್ವಾ? ಪಿಒಕೆ ಭಾರತದ ಅಂಗ ಅಂತ ಕಾಂಗ್ರೆಸ್ ಹೇಳಲ್ವಾ? ಕೈ ಸದಸ್ಯರ ಮೇಲೆ ವಾಗ್ದಾಳಿ ನಡೆಸಿದ್ದರು. 
ಇನ್ನು ತನ್ನದೇ ಪಕ್ಷದ ಸಂಸದ ಕಾಶ್ಮೀರ ವಿವಾದ ಸಂಬಂದ ವಿವಾದಾತ್ಮಕ ಹೇಳಿಕೆ ನೀಡಿದ್ದು ಸೋನಿಯಾ ಗಾಂಧಿ ಅವರನ್ನು ಕೆರಳಿಸಿದೆ. ಅಲ್ಲದೆ ಅಧೀರ್ ರಂಜನ್ ಹೇಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com