ಈ ಬಾರಿಯ ಅಧಿವೇಶನ ದಾಖಲೆ: ಆರ್ಟಿಕಲ್ 370, ತಲಾಕ್ ಸೇರಿ ರಾಜ್ಯಸಭೆಯಲ್ಲಿ 31 ಮಸೂದೆ ಅಂಗೀಕಾರ

ಈ ಬಾರಿಯ 249ನೇ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪ ಶೇಕಡ 104ರಷ್ಟು ಫಲಪ್ರದವಾಗಿದ್ದು, 31 ಮಸೂದೆಗಳ ಅಂಗೀಕಾರವಾಗಿದೆ ಎಂದು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ...
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ನವದೆಹಲಿ: ಈ ಬಾರಿಯ 249ನೇ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪ ಶೇಕಡ 104ರಷ್ಟು ಫಲಪ್ರದವಾಗಿದ್ದು, 31 ಮಸೂದೆಗಳ ಅಂಗೀಕಾರವಾಗಿದೆ ಎಂದು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ತಿಳಿಸಿದ್ದು, ಕಳೆದ 41 ವರ್ಷಗಳಲ್ಲಿ ಇದು 5ನೇ ಅತ್ಯುತ್ತಮ ಕಲಾಪವೆನಿಸಿದೆ ಎಂದು ಹೇಳಿದ್ದಾರೆ.
ಸದಸ್ಯರನ್ನು ಶ್ಲಾಘಿಸಿದ ನಾಯ್ಡು, ಉತ್ಪಾದಕತೆ ಮತ್ತು ಅಡೆತಡೆಗಳ ಕಡಿತದ ದೃಷ್ಟಿಯಿಂದ ಇದನ್ನು ಉಳಿಸಿಕೊಳ್ಳುವುದು ಸವಾಲಾಗಿದೆ.  ಈ ಬಾರಿಯ ಕಲಾಪದಲ್ಲಿ ರಾಜ್ಯಸಭೆಯಲ್ಲಿ 31 ಹಾಗೂ ಲೋಕಸಭೆಯಲ್ಲಿ 36 ಮಸೂದೆಗಳು ಅಂಗೀಕಾರವಾಗಿವೆ ಎಂದರು.
ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರವೆಂದು ಘೋಷಿಸುವ ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ ದೂರದೃಷ್ಟಿಯಿಂದ ಕೂಡಿದ್ದು, ಮಹತ್ವದ್ದಾಗಿದೆ ಈ ಶಾಸನವು "ಪರಂಪರೆಯಿಂದ ಬೆಳೆದುಬಂದಿರುವ ಸಮಸ್"ಯೆಗಳನ್ನು ಪರಿಹರಿಸಿದೆ ಎಂದು ಹೇಳಿದರು. ರಾಜ್ಯಸಭೆಯ ಕಲಾಪವನ್ನು ಬುಧವಾರ ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಗಿದೆ  ಕಳೆದ 17 ವರ್ಷಗಳಲ್ಲಿ ನಡೆದ ಕಲಾಪಗಳಿಗೆ ಹೋಲಿಸಿದರೆ ಅತ್ತುತ್ತಮ ಕಲಾಪವೆಂದು ಪರಿಗಣಿಸಲ್ಪಟ್ಟು ಸಂಸತ್ ನ ಇತಿಹಾಸ ಪುಸ್ತಕದಲ್ಲಿ ದಾಖಲಾಗಿದೆ.
ಬುಧವಾರ ಅಧಿವೇಶನದ ಕೊನೆಯ ದಿನವಾದರೂ, ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಸಂಖ್ಯೆಯನ್ನು 32 ರಿಂದ 35ಕ್ಕೆ ಹೆಚ್ಚಿಸುವ “ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ-2019ಕ್ಕೆ ಅಂಗೀಕಾರ ಪಡೆಯಲಾಯಿತು. ಅಲ್ಲದೆ ಮಂಗಳವಾರ ರಾತ್ರಿ ವಿಧಿವಶರಾದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಬಾರಿಯ ಅಧಿವೇಶನದ ಒಟ್ಟು 19 ಕಲಾಪಗಳಲ್ಲಿ ಕೇವಲ 9 ಗಂಟೆ 12 ನಿಮಿಷ ಮಾತ್ರ ಕಲಾಪಕ್ಕೆ ಭಂಗವಾಗಿದೆ ಎಂದು ವೆಂಕಯ್ಯ ನಾಯ್ಡು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com