
ಸೀತಾರಾಮ್ ಯೆಚೂರಿ
Source : PTI
ಶ್ರೀನಗರ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.
ಸಿಪಿಐ(ಎಂ) ಶಾಸಕ ಎಂವೈ ತಾರಿಗಾಮಿ ಆರೋಗ್ಯ ಸರಿಯಿಲ್ಲದ್ದ ಕಾರಣ ಅವರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವುದಾಗಿ ಆಡಳಿತಕ್ಕೆ ಮಾಹಿತಿ ನೀಡಿದ್ದರೂ ಎಲ್ಲಿಯೂ ಹೋಗಲು ತಮ್ಮಗೆ ಅವಕಾಶ ನೀಡಲಿಲ್ಲ, ಈ ಅಕ್ರಮದ ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದ್ದಾಗಿ ಅವರು ಟ್ವೀಟರ್ ನಲ್ಲಿ ಹೇಳಿದ್ದಾರೆ.
ಸಿಪಿಐ (ಎಂ) ಮುಖಂಡರಾದ ಯೂಸಫ್ ತಾರಿಗಾಮಿ ಹಾಗೂ ಇನ್ನಿತರ ಮುಖಂಡರ ಭೇಟಗಾಗಿ ಯೆಚೂರಿ ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಇಂದು ಬೆಳಗ್ಗೆ ಶ್ರೀನಗರಕ್ಕೆ ತೆರಳಿದ್ದರು.
ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆ ಹೊಂದಿರುವುದಾಗಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ಯೆಚೂರಿ ಪತ್ರ ಬರೆದಿದ್ದರು.
ನಿನ್ನೆ ದಿನ ಶ್ರೀನಗರಕ್ಕೆ ತೆರಳಿದ ಕಾಂಗ್ರೆಸ್ ಮುಖಂಡ ಗುಲಾಮ್ ನಬೀ ಅಜಾದ್ ಅವರನ್ನು ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಕಳುಹಿಸಲಾಗಿತ್ತು.
Stay up to date on all the latest ರಾಷ್ಟ್ರೀಯ news