ಸೋನಿಯಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ: ಬಿಜೆಪಿ ಅಣಕ

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಮತ್ತೆ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಲಾಗಿದೆ.  ಅವರನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಅಣಕವಾಡಿರುವ ಬಿಜೆಪಿ, ಇದು ಭಟ್ಟಂಗಿತನ ಮತ್ತು ಗುಲಾಮಗಿರಿಯ ಕ್ರಿಯೆ ಎಂದು ಹೇಳಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಮತ್ತೆ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಲಾಗಿದೆ.  ಅವರನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಅಣಕವಾಡಿರುವ ಬಿಜೆಪಿ, ಇದು ಭಟ್ಟಂಗಿತನ ಮತ್ತು ಗುಲಾಮಗಿರಿಯ ಕ್ರಿಯೆ ಎಂದು ಹೇಳಿದೆ.


"ಪ್ರೀತಿಯಿಂದ ಕಾಂಗ್ರೆಸ್‌ಗೆ...." ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಳವೀಯಾ ಟ್ವೀಟ್ ಮಾಡಿದ್ದಾರೆ.


ಆದಾಗ್ಯೂ, ಮತ್ತೊಂದು ವೀಡಿಯೊದಲ್ಲಿ, ನೀವು ನಿಮ್ಮ ಇಡೀ ಜೀವನದಲ್ಲಿ - ಉಳಿದ ಕಾಂಗ್ರೆಸ್ ನಾಯಕರು - ತಾಯಿ-ಮಗನಿಗೆ ಗುಲಾಮರಾಗಿರುತ್ತೀರಿ ಎಂದು ಟೀಕಿಸಲಾಗಿದೆ. ಅದಕ್ಕೆ ಹಿಂದಿ ಚಿತ್ರವೊಂದರ ದೃಶ್ಯವನ್ನು ತೋರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com