ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು?

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿ 370ನ್ನು ತೆಗೆದುಹಾಕಿರುವುದರಿಂದ ಸದುಪಯೋಗವಾಗಲಿದೆ ಮತ್ತು ದೇಶದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಛರಿಸಿದ್ದಾರೆ.
ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು?

ಚೆನ್ನೈ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿ 370ನ್ನು ತೆಗೆದುಹಾಕಿರುವುದರಿಂದ ಸದುಪಯೋಗವಾಗಲಿದೆ ಮತ್ತು ದೇಶದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಛರಿಸಿದ್ದಾರೆ.


ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದ್ದರೂ ಕೂಡ ಅಂದು ರಾಜ್ಯಸಭೆಯಲ್ಲಿ ವಿಧೇಯಕವನ್ನು ಮಂಡಿಸಿದಾಗ ಏನಾಗಬಹುದು ಎಂಬ ಆತಂಕ ಖಂಡಿತಾ ಇತ್ತು ಎಂದರು.


ಅವರು ಇಂದು ಚೆನ್ನೈಯಲ್ಲಿ ಉಪ ರಾಷ್ಟ್ರಪತಿಯಾಗಿ, ರಾಜ್ಯಸಭಾ ಸದಸ್ಯರಾಗಿ ಆಡಳಿತ ನಡೆಸಿದ ಎಂ ವೆಂಕಯ್ಯ ನಾಯ್ಡು ಅವರ ಅನುಭವಗಳ ಕುರಿತ 'ಲಿಜನಿಂಗ್,ಲರ್ನಿಂಗ್ ಅಂಡ್ ಲೀಡಿಂಗ್ 'ಪುಸ್ತಕವನ್ನು ಬಿಡುಗಡೆ ಮಾಡಿದರು. ಸಂವಿಧಾನ ವಿಧಿ 370ನ್ನು ರದ್ದುಪಡಿಸುವ ಕುರಿತು ಮೇಲ್ಮನೆಯಲ್ಲಿ ಮಂಡಿಸಲು ಮುಂದಾದಾಗ ಯಾವಾಗ ಸದನದಲ್ಲಿ ಮಂಡಿಸಬೇಕು, ಸದನ ಹೇಗೆ ಕಾರ್ಯನಿರ್ವಹಿಸಬಹುದು? ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತವಿಲ್ಲದಿದ್ದರೂ ಅಲ್ಲೇ ಮೊದಲು ವಿಧೇಯಕವನ್ನು ಮಂಡಿಸಲು ಮುಂದಾದೆ, ಸಭಾಪತಿ ಸ್ಥಾನದಲ್ಲಿದ್ದ ವೆಂಕಯ್ಯ ನಾಯ್ಡು ಅವರಿಂದ ಸಹಾಯವಾಯಿತು ಎಂದು ಸ್ಮರಿಸಿಕೊಂಡರು.


ಈ ದೇಶದ ಶಾಸನಸಭೆಯ ಸದಸ್ಯನಾಗಿ ಸಂವಿಧಾನ ವಿಧಿ 370 ಯಾವತ್ತಿಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಹಾಯವಾಗಲಿಲ್ಲ. ಇದನ್ನು ಹಲವು ವರ್ಷಗಳ ಹಿಂದೆಯೇ ತೆಗೆದುಹಾಕಬೇಕಾಗಿತ್ತು. ಅದನ್ನು ತೆಗೆದುಹಾಕಿದರೆ ಏನಾಗುತ್ತದೆ, ಏನು ಪರಿಸ್ಥಿತಿ ಮುಂದೆ ಬರಬಹುದು ಎಂಬ ಬಗ್ಗೆ ಗೃಹ ಸಚಿವನಾಗಿ ನನ್ನ ಮನಸ್ಸಿನಲ್ಲಿ ಯಾವ ಗೊಂದಲವೂ ಇರಲಿಲ್ಲ. ಇದರಿಂದ ಭಯೋತ್ಪಾದನೆ ಕೊನೆಗೊಳ್ಳಲಿದೆ, ಇನ್ನು ಮುಂದೆ ಜಮ್ಮು-ಕಾಶ್ಮೀರ ಬೆಳವಣಿಗೆಯತ್ತ ಸಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com