ಉತ್ತರಖಂಡದಲ್ಲಿ ಮೇಘಸ್ಫೋಟ: ಭೀಕರ ಪ್ರವಾಹ, 6 ಮಂದಿ ಸಾವು, ಹಲವರ ನಾಪತ್ತೆ

ಉತ್ತರಾಖಂಡದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಛ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ,
ಉತ್ತರಖಂಡದಲ್ಲಿ ಮೇಘಸ್ಫೋಟ
ಉತ್ತರಖಂಡದಲ್ಲಿ ಮೇಘಸ್ಫೋಟ

ಉತ್ತರ ಕಾಶಿಯ ಮೋರಿ ತೆಹ್ಸಿಲ್ ನಲ್ಲಿ ಮೇಘಸ್ಫೋಟ, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಐಟಿಬಿಪಿ ಸಿಬ್ಬಂದಿಗಳ ನಿಯೋಜನೆ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಛ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ,

ಉತ್ತರ ಖಂಡದ ಉತ್ತರ ಕಾಶಿಯ ಮೋರಿ ತೆಹ್ಸಿಲ್ ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಭಾರಿ ಮಳೆ ಮತ್ತು ಭೀಕರ ಪ್ರವಾಹ ಏರ್ಪಟ್ಟಿದೆ. ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಮನೆಯೊಂದು ಪ್ರವಾಹಕ್ಕೆ ಸಿಲುಕಿ ಉರುಳಿದ್ದು, ಅದರಲ್ಲಿದ್ದ ತಾಯಿ ಮತ್ತು ಮಗು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. 35 ವರ್ಷದ ರೂಪಾದೇವಿ ಮತ್ತು 9 ತಿಂಗಳ ಮಗು ಸಾವನ್ನಪ್ಪಿದೆ. ಮನೆ ಕೊಚ್ಚಿಹೋದ ಸಂದರ್ಭದಲ್ಲಿ ತಾಯಿ ಮತ್ತು ಮಗು ಒಳಗೆ ನಿದ್ರಿಸುತ್ತಿದ್ದರು ಎನ್ನಲಾಗಿದೆ. 

ತಾಯಿ ಮಗು ಸೇರಿದಂತೆ ಮೇಘಸ್ಫೋಟಕ್ಕೆ ಚಮೋಲಿಯ ಘಾಟ್ ಪ್ರದೇಶದಲ್ಲೇ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ, ಇನ್ನು ಮೇಘಸ್ಫೋಟ ಸಂಭವಿಸಿದ ಬೆನ್ನಲ್ಲೇ ಉತ್ತರಾಖಂಡಕ್ಕೆ ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣೆಗೆ ರವಾನಿಸಲಾಗಿದೆ. ಇನ್ನು ಈಗಾಗಲೇ ಸ್ಥಳೀಯ ರಕ್ಷಣಾ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ.

ಇನ್ನು ಪ್ರಹಾಹದ ಭೀಕರ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com