ಧನೋವಾ
ಧನೋವಾ

ಪಾಕಿಸ್ತಾನದ ಬೆದರಿಕೆಗೆ ಬಗ್ಗದಂತೆ ವಾಯುಪಡೆಗೆ ಧನೋವಾ ಸೂಚನೆ 

ಗಡಿಯಲ್ಲಿ ಯಾವುದೇ  ಸಂಭವನೀಯ ದಾಳಿಯನ್ನು  ಎದುರಿಸಲು ಸಿದ್ಧರಾಗಿರುವಂತೆ ವಾಯುಡೆಗೆ  ಏರ್ ಚೀಪ್ ಮಾರ್ಷಲ್ ಬಿಎಸ್ ಧನೋವಾ ಸೂಚಿಸಿದ್ದಾರೆ.

ನವದೆಹಲಿ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಬೆನ್ನಲ್ಲೇ,  ಗಡಿಯಲ್ಲಿ ಯಾವುದೇ  ಸಂಭವನೀಯ ದಾಳಿಯನ್ನು  ಎದುರಿಸಲು ಸಿದ್ಧರಾಗಿರುವಂತೆ ವಾಯುಡೆಗೆ  ಏರ್ ಚೀಪ್ ಮಾರ್ಷಲ್ ಬಿಎಸ್ ಧನೋವಾ ಸೂಚಿಸಿದ್ದಾರೆ.

ಭಾರತ- ಪಾಕಿಸ್ತಾನ ಗಡಿ ಪ್ರದೇಶದಲ್ಲಿನ ಪರಿಸ್ಥಿತಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಯೋಜನೆಯನ್ನು ನೋಡಿದ್ದೇವೆ. ಭಾರತೀಯ ವಾಯುಪಡೆ ಯಾವಾಗಲೂ ನಿಗಾ ವಹಿಸಿದೆ. ವಾಯು ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಯಾವಾಗಲೂ ಎಚ್ಚರಿಕೆಯಿಂದ ಇರುವುದಾಗಿ ಹೇಳಿದರು. 

ಶತ್ರು ರಾಷ್ಟ್ರಗಳು ಹೋರಾಟಕ್ಕೆ ಬರುವ ಮುಂಚಿತವಾಗಿಯೇ ನಾವು ಸಿದ್ದರಾಗಿ ಇರುತ್ತೇವೆ. ಆದಾಗ್ಯೂ, ನಾಗರಿಕ  ವಿಮಾನಗಳ ಮೇಲೂ ಕಣ್ಣಿಡಬೇಕಾಗಿದೆ. ಪುರುಲಿಯಾ ಏರ್ ಡ್ರಾಪ್ ನಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಅವರು ತಿಳಿಸಿದರು. 

ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಚಲನವಲನ ಕಳೆದ ವಾರ ಸಾಮಾನ್ಯವಾಗಿತ್ತು.ಈ ಬೆಳವಣಿಗೆ ಬಗ್ಗೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com