ನೂತನ ಸಚಿವರೊಂದಿಗೆ ರಾಜ್ಯಪಾಲರು ಹಾಗೂ ಸಿಎಂ
ನೂತನ ಸಚಿವರೊಂದಿಗೆ ರಾಜ್ಯಪಾಲರು ಹಾಗೂ ಸಿಎಂ

ಯೋಗಿ ಆದಿತ್ಯನಾಥ್ ಸಂಪುಟ ಪುನರ್ ರಚನೆ: ಸಚಿವರಾಗಿ 23 ಶಾಸಕರು ಪ್ರಮಾಣ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಮೊದಲ ಬಾರಿಗೆ ಸಂಪುಟ ಪುನರ್ರಚನೆ ಮಾಡಿದ್ದು, 23 ಹೊಸ ಶಾಸಕರಿಗೆ ಮಂತ್ರಿ ಭಾಗ್ಯ ನೀಡಿದ್ದಾರೆ.

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಮೊದಲ ಬಾರಿಗೆ ಸಂಪುಟ ಪುನರ್ರಚನೆ ಮಾಡಿದ್ದು, 23 ಹೊಸ ಶಾಸಕರಿಗೆ ಮಂತ್ರಿ ಭಾಗ್ಯ ನೀಡಿದ್ದಾರೆ.

ಇಂದು ರಾಜಭವನದಲ್ಲಿ 23 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

6 ಶಾಸಕರು ಸಂಪುಟ ದರ್ಜೆ ಸಚಿವರಾಗಿ,  6 ಶಾಸಕರು ರಾಜ್ಯ ಸ್ವತಂತ್ರ ಪ್ರಭಾರ ಸಚಿವರಾಗಿ ಮತ್ತು 11 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಂದು ಯೋಗಿ ಆದಿತ್ಯನಾಥ್ ಸಂಪುಟ ಸೇರಿದ ಬಹುತೇಕ ಶಾಸಕರು ಮೊದಲ ಬಾರಿ ಸಚಿವರಾಗಿದ್ದು, ಆಡಳಿತಾತ್ಮಕ ಅನುಭವ ಹೊಂದಿಲ್ಲ.

ಇನ್ನು ನಾಲ್ವರು ರಾಜ್ಯ ಖಾತೆ ಸಚಿವರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com