ಕಣಿವೆ ರಾಜ್ಯದಲ್ಲಿ ಶೀಘ್ರದಲ್ಲೇ ಎಲ್ಲವೂ ಸಹಜಸ್ಥಿತಿಗೆ ಬರಲಿದೆ: ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

Published: 25th August 2019 08:08 PM  |   Last Updated: 25th August 2019 08:08 PM   |  A+A-


Guv Satya Pal Malik

ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್

Posted By : Srinivasamurthy VN
Source : ANI

ಜಮ್ಮು ಮತ್ತು ಕಾಶ್ಮೀರದಲ್ಲಿ ಔಷಧಿಗಳ ಅಭಾವ ಇಲ್ಲ, ಕಪೋಲಕಲ್ಪಿತ ಸುದ್ದಿಗಳ ನಂಬಬೇಡಿ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುವುದಕ್ಕಾಗಿ ದೆಹಲಿಗೆ ಆಗಮಿಸಿದ್ದ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು, ಸುದ್ದಿಸಂಸ್ಥೆ ಜತೆ ಮಾತನಾಡಿದರು. ಈ ವೇಳೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಎಲ್ಲವೂ ಸಹಜಸ್ಥಿತಿಗೆ ಬರಲಿದೆ. ನಿಧಾನವಾಗಿ ಕಣಿವೆಯಲ್ಲಿ ಹೇರಿಕೆಯಾಗಿದ್ದ ನಿರ್ಬಂಧವನ್ನು ತೆಗೆಯಲಾಗುವುದು.  ಕಾಶ್ಮೀರದಲ್ಲಿ ನಿರ್ಬಂಧ ಹೇರಿಕೆಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸದಂತೆ ನೋಡಿಕೊಳ್ಳುವುದು ನಮ್ಮ ನಿಲುವು.  10 ದಿನಗಳ ಕಾಲ ಟೆಲಿಫೋನ್ ಇರಲ್ಲ. ಆದರೆ ನಾವು ಆದಷ್ಟು ಬೇಗ ನಿರ್ಬಂಧವನ್ನು ತೆಗೆಯುತ್ತೇವೆ ಎಂದು ಹೇಳಿದ್ದಾರೆ.

ಕಾಶ್ಮೀರ ಕಣಿವೆ ರಾಜ್ಯದಲ್ಲಿ ಔಷಧಿ ಮತ್ತು ಅಗತ್ಯ ವಸ್ತುಗಳ ಅಭಾವ ಇದೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ.  ಕಾಶ್ಮೀರದಲ್ಲಿ ಅಗತ್ಯ ವಸ್ತುಗಳು ಮತ್ತು ಔಷಧಿಯ ಅಭಾವವಿಲ್ಲ.  ಈದ್ ಹಬ್ಬದ ವೇಳೆ ನಾವು ಮಾಂಸ, ತರಕಾರಿ ಮತ್ತು ಮೊಟ್ಟೆಗಳನ್ನು ಜನರ ಮನೆಗಳಿಗೆ ತಲುಪಿಸಿದ್ದೆವು. 10-15 ದಿನಗಳಲ್ಲಿ ನಿಮ್ಮ ಅಭಿಪ್ರಾಯಗಳು ಬದಲಾಗಲಿವೆ ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ವಿಶೇಷ ಅಧಿಕಾರ ನೀಡುತ್ತಿದ್ದ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿ ಆ.5ರಂದು ಸುಗ್ರೀವಾಜ್ಱಎ ಹೊರಡಿಸಿತ್ತು. ಬಳಿಕ ಉಭಯ ಸದನಗಳಿಂದಲೂ ಅನುಮೋದನೆ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಅಶಾಂತಿಯನ್ನುಂಟು ಮಾಡಬಹುದು ಎಂಬ ಕಾರಣಕ್ಕಾಗಿ ಓಮರ್​ ಅಬ್ದುಲ್ಲಾ, ಮಹೆಬೂಬಾ ಮುಫ್ತಿ ಸೇರಿ ಹಲವು ಮಾಜಿ ಸಿಎಂಗಳನ್ನು ಗೃಹ ಬಂಧನದಲ್ಲಿರಿಸಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp