3 ವರ್ಷಗಳಲ್ಲಿ 75 ನೂತನ ವೈದ್ಯಕೀಯ​ ಕಾಲೇಜು: ಕೇಂದ್ರ ಸರ್ಕಾರ

ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧ ನಗರಗಳಲ್ಲಿ 75 ನೂತನ ವೈದ್ಯಕೀಯ​ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂದಿನ 3 ವರ್ಷಗಳಲ್ಲಿ​ ನೂತನ 75 ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧ ನಗರಗಳಲ್ಲಿ 75 ನೂತನ ವೈದ್ಯಕೀಯ​ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ 3 ವರ್ಷಗಳಲ್ಲಿ​ ನೂತನ 75 ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಕುರಿತಂತೆ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಜಾವ್ಡೇಕರ್ ಅವರು, '2021-22ರ ವೇಳೆಗೆ ದೇಶದಲ್ಲಿ 75 ನೂತನ ಸರ್ಕಾರಿ ವೈದ್ಯಕೀಯ​ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಅಂತೆಯೇ ಈ ನೂತನ ವೈದ್ಯಕೀಯ​ ಕಾಲೇಜುಗಳ ಸ್ಥಾಪನೆಗೆ 24,375 ಕೋಟಿ ವೆಚ್ಚವಾಗಲಿದ್ದು, 75 ಕಾಲೇಜುಗಳ ಸ್ಥಾಪನೆಯಿಂದಾಗಿ 15,700 ಮೆಡಿಕಲ್​ ಸೀಟುಗಳು ಅಧಿಕವಾಗುತ್ತವೆ, ಅಂದರೆ ಹೆಚ್ಚುವರಿ ವೈದ್ಯರು ಲಭ್ಯವಾಗುತ್ತಾರೆ. ಯಾವುದೇ ವೈದ್ಯಕೀಯ ಸಂಸ್ಥೆಗಳಿಲ್ಲದ ಹಿಂದುಳಿದ ಪ್ರದೇಶಗಳಲ್ಲಿ ಮೆಡಿಕಲ್​ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ 15,700ಸೀಟುಗಳು ಹೆಚ್ಚಳವಾಗಲಿದೆ. ಪ್ರತಿ ಆಸ್ಪತ್ರೆಯಲ್ಲಿ ಕನಿಷ್ಠ 200 ಹಾಸಿಗೆಗಳಿರುವ ಹಾಗೆ ಯೋಜನೆ ಮಾಡಿಕೊಳ್ಳಲಾಗಿದೆ. ಇದರಿಂದ ಕನಿಷ್ಠ ಮಟ್ಟದ ಆರೋಗ್ಯ ಸೇವೆ ಇರುವಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಜಾವ್ಡೇಕರ್ ಹೇಳಿದರು.

75 ನೂತನ ಮೆಡಿಕಲ್​ ಕಾಲೇಜುಗಳ ಸ್ಥಾಪನೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅತೀ ದೊಡ್ಡ ಸಕರಾತ್ಮಕ ನಿರ್ಣಯವಾಗಿದ್ದು, ಕಳೆದ 5 ವರ್ಷಗಳಲ್ಲಿ 82 ಮೆಡಿಕಲ್​ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈಗ 2022ರ ವೇಳೆಗೆ ಇನ್ನೂ 75 ಕಾಲೇಜುಗಳನ್ನು ಆರಂಭಿಸುವುದು ಇನ್ನೂ ದೊಡ್ಡ ಮಟ್ಟದ ಪ್ರಗತಿಯಾಗುತ್ತದೆ ಎಂದು ಜಾವ್ಡೇಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com