ಪಾಕ್ ದಾಳಿ ಯತ್ನ ವಿಫಲಗೊಳಿಸಿ ಇಬ್ಬರು ಪಾಕ್ ಕಮಾಂಡೋ ಹೊಡೆದುರುಳಿಸಿದ ಭಾರತೀಯ ಸೇನೆ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ ಬಳಿಕ ಪಾಕಿಸ್ತಾನ ಯುದ್ಧೋನ್ಮಾದದಲ್ಲಿದೆ. ಪಾಕ್ ಗಡಿ ಭದ್ರತಾ ಪಡೆ(ಬಿಎಟಿ)ಯ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು...
ಭಾರತೀಯ ಸೇನೆ
ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ ಬಳಿಕ ಪಾಕಿಸ್ತಾನ ಯುದ್ಧೋನ್ಮಾದದಲ್ಲಿದೆ. ಪಾಕ್ ಗಡಿ ಭದ್ರತಾ ಪಡೆ(ಬಿಎಟಿ)ಯ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು ಅಲ್ಲದೆ ಪಾಕ್ ನ ಇಬ್ಬರು ಕಮಾಂಡೋಗಳನ್ನು ಹೊಡೆದುರುಳಿಸಿದೆ.

ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್(ಎಸ್ಎಸ್ಜಿ) ಕಮಾಂಡೋಗಳು ಕಾಶ್ಮೀರದ ಗ್ಯುರೆಝ್ ಸೆಕ್ರ್ ನಲ್ಲಿ ದಾಳಿ ನಡೆಸಲು ಯತ್ನಿಸಿದ್ದರು. ಈ ವೇಳೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿ ಇಬ್ಬರು ಕಮಾಂಡೋಗಳನ್ನು ಹತ್ಯೆಗೈದಿದ್ದಾರೆ. 

ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಈಗಾಗಲೇ ನೂರಕ್ಕು ಹೆಚ್ಚು ಎಸ್ಎಸ್ಜಿ ಕಮಾಂಡೋಗಳನ್ನು ನಿಯೋಜಿಸಿದೆ. ಇದರ ಜೊತೆಗೆ ಎಸ್ಎಸ್ ಜಿ ಕಮಾಂಡೋಗಳು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com