ನೃಪೇಂದ್ರ ಮಿಶ್ರಾ ಸೆಪ್ಟೆಂಬರ್‌ನಲ್ಲಿ ನಿವೃತ್ತಿ: ಪಿ.ಕೆ. ಸಿನ್ಹಾ ಪ್ರಧಾನಿ ಕಚೇರಿ ವಿಶೇಷಾಧಿಕಾರಿ

2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಮುಂದಿನ ತಿಂಗಳು ಪ್ರಬಲ ಹುದ್ದೆಯನ್ನು ತ್ಯಜಿಸಿ, ಪ್ರಧಾನ ಮಂತ್ರಿ ಕಚೇರಿಯನ್ನು ತೊರೆಯಲಿದ್ದಾರೆ
ನೃಪೇಂದ್ರ ಮಿಶ್ರಾ
ನೃಪೇಂದ್ರ ಮಿಶ್ರಾ

ನವದೆಹಲಿ: 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಮುಂದಿನ ತಿಂಗಳು ಪ್ರಬಲ ಹುದ್ದೆಯನ್ನು ತ್ಯಜಿಸಿ, ಪ್ರಧಾನ ಮಂತ್ರಿ ಕಚೇರಿಯನ್ನು ತೊರೆಯಲಿದ್ದಾರೆ.

ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರನ್ನು ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ (ಒಎಸ್‌ಡಿ) ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.ಮಿಶ್ರಾ ಅವರನ್ನು ಸೆಪ್ಟೆಂಬರ್ ಮಧ್ಯದಲ್ಲಿ ತಮ್ಮ ಕರ್ತವ್ಯದಿಂದ ಮುಕ್ತಗೊಳಿಸಲಾಗುವುದು ಎಂದು ಮೋದಿ ಶುಕ್ರವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


 ನೀಪೇಂದ್ರ ಮಿಶ್ರಾ ಅವರು ಅತ್ಯುತ್ತಮ ಅಧಿಕಾರಿ. ಅವರು ಸಾರ್ವಜನಿಕ ನೀತಿ ಮತ್ತು ಆಡಳಿತದ ಬಗ್ಗೆ ಹೆಚ್ಚಿನ ಗ್ರಹಿಕೆಯನ್ನು ಹೊಂದಿದ್ದಾರೆ. ನಾನು 2014ರಲ್ಲಿ ದೆಹಲಿಗೆ ಹೊಸಬನಾಗಿದ್ದಾಗ, ಅವರು ನನಗೆ ಬಹಳಷ್ಟು ಕಲಿಸಿದರು ಮತ್ತು ಅವರ ಮಾರ್ಗದರ್ಶನ ಅತ್ಯಂತ ಮೌಲ್ಯಯುತವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 ಐದು ವರ್ಷಗಳ ಕಾಲ ಪ್ರಧಾನಿ ಕಚೇರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಮತ್ತು ಭಾರತದ ಬೆಳವಣಿಗೆಯ ಪಥದಲ್ಲಿ ಅಳಿಸಲಾಗದ ಕೊಡುಗೆ ನೀಡಿದ ನಂತರ ನೃಪೇಂದ್ರ ಮಿಶ್ರಾ ಅವರು ಜೀವನದ ಹೊಸ ಹಂತದತ್ತ ಹೊರಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ನನ್ನ ಶುಭಾಶಯಗಳು ಎಂದು ಮೋದಿ ಸಂದೇಶದಲ್ಲಿ ತಿಳಿಸಿದ್ದಾರೆ. 

 ಉತ್ತರ ಪ್ರದೇಶದ ಕೇಡರ್‌ನ 1967 ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ, ನೃಪ್ರೇಂದ್ರ ಮಿಶ್ರಾ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಟೆಲಿಕಾಂ ನಿಯಂತ್ರಕ ಪ್ರಾಧಿಕಾರದ ಅಧ್ಯಕ್ಷರು, ಮತ್ತು ಭಾರತ ಸರ್ಕಾರದ ರಸಗೊಬ್ಬರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪಿ.ಕೆ. ಸಿನ್ಹಾ ಆಗಸ್ಟ್ 30 ರಂದು 31 ನೇ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನಿವೃತ್ತರಾದರು. 1977 ರ ಉತ್ತರ ಪ್ರದೇಶದ ಕೇಡರ್‌ನ ಐಎಎಸ್ ಅಧಿಕಾರಿ ಶ್ರೀ ಸಿನ್ಹಾ ಅವರು ಕೇಂದ್ರದಲ್ಲಿ ಭಾರತದ ವಿದ್ಯುತ್ ಕಾರ್ಯದರ್ಶಿ ಮತ್ತು ಹಡಗು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಯುಪಿಯಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

  2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಮುಂದಿನ ನೇಮಕ ಆಗುವವರೆಗೂ ಸಿನ್ಹಾ ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com