5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಿ: ಮೋದಿ ಕನಸಿಗೆ ಸುಬ್ರಮಣಿಯನ್ ಸ್ವಾಮಿ ಗುನ್ನ!

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಏರಿಸುವ ಮಹತ್ವದ ಗುರಿ ಹೊಂದಿದ್ದು ಆದರೆ ಅದನ್ನು ಸಾಧಿಸುವ ಧೈರ್ಯ ಮತ್ತು ಜ್ಞಾನ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಬಿಜೆಪಿ... 
ಸುಬ್ರಮಣಿಯನ್ ಸ್ವಾಮಿ-ಮೋದಿ
ಸುಬ್ರಮಣಿಯನ್ ಸ್ವಾಮಿ-ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಏರಿಸುವ ಮಹತ್ವದ ಗುರಿ ಹೊಂದಿದ್ದು ಆದರೆ ಅದನ್ನು ಸಾಧಿಸುವ ಧೈರ್ಯ ಮತ್ತು ಜ್ಞಾನ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಬಿಜೆಪಿ ರಾಜ್ಯಸಭಾ ಎಂಪಿ ಸುಬ್ರಮಣಿಯನ್ ಸ್ವಾಮಿ ಖಡಕ್ ಟ್ವೀಟ್ ಮಾಡಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದರು. ಅಲ್ಲದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್ ವೇಳೆ ಇದನ್ನೇ ಹೇಳಿದ್ದರು. 

ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ. ಎಷ್ಟೇ ಕ್ರಮಗಳನ್ನು ಕೈಗೊಂಡರು ಆರ್ಥಿಕತೆ ಪುನರ್ ಚೇತನಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ವೊಂದನ್ನು ಮಾಡಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿನ ಮಾತು ಎಂದು ಹೇಳಿದ್ದಾರೆ.

ಕಳೆದ ಆರು ವರ್ಷಗಳಲ್ಲೇ ಜಿಡಿಪಿ ದರ ಕನಿಷ್ಠ ಶೇ. 5ಕ್ಕೆ ಕುಸಿದಿದೆ. ಇದು ಹೀಗೆ ಮುಂದುವರೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸದೆ ಹೋದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಲು ಸಿದ್ಧರಾಗಬೇಕಾಗುತ್ತದೆ ಎಂದರು.

ಬರೀ ಧೈರ್ಯ ಮತ್ತು ದಿಟ್ಟತನವಿದ್ದರೆ ಆರ್ಥಿಕ ಕುಸಿತವನ್ನು ತಡೆಗಟ್ಟಲು ಸಾಧ್ಯವಿಲ್ಲ. ಧೈರ್ಯ ಮತ್ತು ಜ್ಞಾನ ಎರಡೂ ಬೇಕಾಗುತ್ತದೆ. ಆದರೆ ಆ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com