ಅಸ್ಸಾಂನಲ್ಲಿ ಪರಿಸ್ಥಿತಿ ಸದ್ಯ ಶಾಂತ: ಗೃಹ ಇಲಾಖೆ; 'ಸುಪ್ರೀಂ' ಮೊರೆ ಹೋಗಲಿರುವ ಎಎಎಸ್ ಯು 

ಅಸ್ಸಾಂ ಎನ್ ಆರ್ ಸಿ ವರದಿ ಪ್ರಕಟಗೊಂಡ ಮೇಲೆ ರಾಜ್ಯದಲ್ಲಿನ ಕಾನೂನು, ಸುವ್ಯವಸ್ಥೆ  ಸದ್ಯ ಶಾಂತಿಯುತವಾಗಿದೆ, ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಸ್ಸಾಂ ಎನ್ ಆರ್ ಸಿ ವರದಿ ಪ್ರಕಟಗೊಂಡ ಮೇಲೆ ರಾಜ್ಯದಲ್ಲಿನ ಕಾನೂನು, ಸುವ್ಯವಸ್ಥೆ  ಸದ್ಯ ಶಾಂತಿಯುತವಾಗಿದೆ, ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.


ಗೃಹ ಸಚಿವಾಲಯ ಈ ಸಂಬಂಧ ರಾಜ್ಯ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. 
ಎನ್ ಸಿಆರ್ ಪಟ್ಟಿಯಿಂದ 19 ಲಕ್ಷಕ್ಕೂ ಅಧಿಕ ಜನರನ್ನು ಹೊರಗಿಟ್ಟದ್ದರ ಪರಿಣಾಮದ ಬಗ್ಗೆ ಈಗಲೇ ಹೇಳುವುದು ಕಷ್ಟ. ಜನರ ಪ್ರತಿಕ್ರಿಯೆ, ವಾಸ್ತವ ಸಂಗತಿಗಳನ್ನು ನೋಡಬೇಕಾಗುತ್ತದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.


ಅಸ್ಸಾಂ ಎನ್ ಆರ್ ಸಿಗೆ ಒಟ್ಟು 3.29 ಕೋಟಿ ಜನರು ಅರ್ಜಿ ಸಲ್ಲಿಸಿದ್ದು ಅವರಲ್ಲಿ 19 ಲಕ್ಷಕ್ಕೂ ಅಧಿಕ ಮಂದಿಯನ್ನು ಹೊರಗಿಡಲಾಗಿದೆ. 


ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ(ಎಎಎಸ್ ಯು) ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವುದಾಗಿ ಹೇಳಿದೆ.


ಅಸ್ಸಾಂನಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸಿ ಅವರನ್ನು ನಾಗರಿಕ ಪಟ್ಟಿಯಿಂದ ಹೊರಗಿಟ್ಟು ಗಡೀಪಾರು ಮಾಡಲು 1985ರ ದಾಖಲಾತಿಗೆ ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಸಹಿ ಹಾಕಿತ್ತು. 


ಅಸ್ಸಾಂನಲ್ಲಿ ನಿಜವಾದ ಭಾರತೀಯರು ಎಷ್ಟು ಮಂದಿ ಇದ್ದಾರೆ ಎಂದು ತಿಳಿಯಲು ಸುಪ್ರೀಂ ಕೋರ್ಟ್ ಆದೇಶದಂತೆ ಎನ್ ಸಿಆರ್ ವರದಿ ಸಿದ್ದಪಡಿಸಲಾಗಿತ್ತು. 


ನಮಗೆ ಈ ವರದಿಯಲ್ಲಿ ತೃಪ್ತಿಯಿಲ್ಲ. ನವೀಕರಣ ಪ್ರಕ್ರಿಯೆಯಲ್ಲಿ ಕೆಲವು ನ್ಯೂನತೆಗಳಿವೆ. ಇದೊಂದು ಅಪೂರ್ಣ ವರದಿಯಾಗಿದೆ. ವರದಿಯಲ್ಲಿರುವ ಎಲ್ಲಾ ನ್ಯೂನತೆ ಮತ್ತು ದೋಷಗಳನ್ನು ತೆಗೆದುಹಾಕುವಂತೆ ನಾವು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಿದ್ದೇವೆ ಎಂದು ಸ್ಟೂಡೆಂಟ್ಸ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಲುರಿಂಜ್ಯೋತಿ ಗೊಗೊಯ್ ತಿಳಿಸಿದ್ದಾರೆ.


ಅಧಿಕಾರಿಗಳು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡು ಬಂದಿದ್ದ ಅಧಿಕೃತ ಸಂಖ್ಯೆಗೆ ಇಂದು ಪ್ರಕಟಗೊಂಡ ವರದಿಯಲ್ಲಿನ ಅಂಕಿಅಂಶ ಹೊಂದಾಣಿಕೆಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com