ಜಮ್ಮು ಕಾಶ್ಮೀರ: ಕುಪ್ವಾರಾದಲ್ಲಿ ಭೀಕರ ಹಿಮಪಾತ, ಓರ್ವ ಯೋಧ ಸಾವು, ಮೂವರು ನಾಪತ್ತೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತವಾಗಿದ್ದು  ಸೇನೆಯ ಪೋಸ್ಟ್ ನಲ್ಲಿದ್ದ ಓರ್ವ ಯೋಧ ಸಾವನ್ನಪ್ಪಿದ್ದರೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಸೇನಾಮೂಲಗಳು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತವಾಗಿದ್ದು  ಸೇನೆಯ ಪೋಸ್ಟ್ ನಲ್ಲಿದ್ದ ಓರ್ವ ಯೋಧ ಸಾವನ್ನಪ್ಪಿದ್ದರೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಸೇನಾಮೂಲಗಳು ಹೇಳಿದೆ.

ಘಟನೆ ಬಳಿಕ ಕಾಣೆಯಾದ ಯೋಧರನ್ನು ಹುಡುಕಲು ಸೇನೆಯು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.. ಈ ವೇಳೆ ಓರ್ವ ಸಿಬ್ಬಂದಿಯನು ಯಶಸ್ವಿಯಾಗಿ ರಕ್ಷಿಸಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಕುಪ್ವಾರಾದಲ್ಲಿ ಹಿಮದ ಕೆಳಗೆ ಸಿಕ್ಕಿಬಿದ್ದ ಕಾಣೆಯಾದ ಸೇನಾ ಯೋಧರ ಪತ್ತೆಗಾಗಿ ಪಾರುಗಾಣಿಕಾ ತಂಡ ಪ್ರಯತ್ನಿಸುತ್ತಿದೆ, ಆದಾಗ್ಯೂ, ಕಠಿಣ ಹವಾಮಾನ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ.

ಈ ಮೊದಲು ನವೆಂಬರ್ 18 ರಂದು ಸಿಯಾಚಿನ್ ಹಿಮನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ನಡೆದ ಘಟನೆಯಲ್ಲಿ, ನಾಲ್ಕು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com