ಉನ್ನಾವೋ ಪ್ರಕರಣ: 90% ಸುಟ್ಟಿದ್ದರೂ 1 ಕಿಮೀ ಓಡಿ ಸಹಾಯಕ್ಕಾಗಿ ಅಂಗಲಾಚಿದ ಅತ್ಯಾಚಾರ ಸಂತ್ರಸ್ಥೆ

ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ತನಗೆ ಬೆಂಕಿ ಹಚ್ಚಲು ಬಂದಾಗ ಐದು ಜನರ ತಂಡದಿಂದ ತಪ್ಪಿಸಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಸಹಾಯಕ್ಕಾಗಿ ಅಳುತ್ತಾ ಸುಮಾರು ಒಂದು ಕಿಲೋಮೀಟರ್ ಓಡಿದ್ದಾಗಿ  ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Published: 05th December 2019 07:29 PM  |   Last Updated: 05th December 2019 07:29 PM   |  A+A-


ಉನ್ನಾವೋ ಪ್ರಕರಣ: 90% ಸುಟ್ಟಿದ್ದರೂ 1 ಕಿಮೀ ಓಡಿ ಸಹಾಯಕ್ಕಾಗಿ ಅಂಗಲಾಚಿದ ಅತ್ಯಾಚಾರ ಸಂತ್ರಸ್ಥೆ

Posted By : Raghavendra Adiga
Source : IANS

ಉನ್ನವೋ(ಉತ್ತರಪ್ರದೇಶ): ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ತನಗೆ ಬೆಂಕಿ ಹಚ್ಚಲು ಬಂದಾಗ ಐದು ಜನರ ತಂಡದಿಂದ ತಪ್ಪಿಸಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಸಹಾಯಕ್ಕಾಗಿ ಅಳುತ್ತಾ ಸುಮಾರು ಒಂದು ಕಿಲೋಮೀಟರ್ ಓಡಿದ್ದಾಗಿ  ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

"ನಾನು ಆಕೆಯ ಬಳಿ ತೆರಳಿದಾಗ ಆಕೆ ತನ್ನ ಫೋನ್ ತೆಗೆದುಕೊಂಡಳು ಹಾಗೂ ತುರ್ತು ಪೋಲೀಸ್ ಕರೆ (೧೦೦) ಸಂಖ್ಯೆಗೆ ಕರೆ ಮಾಡಿದ್ದಳು." ರವೀಂದ್ರ ಪ್ರಕಾಶ್ಎಂಬಾತ ಮಾದ್ಯಮಗಳಿಗೆ ತಿಳಿಸಿದ್ದಾರೆ. ಆತ ಅತ್ಯಾಚಾರ ಸಂತ್ರಸ್ಥೆಯನ್ನು ಪ್ರತ್ಯಕ್ಷ ಕಂಡಿದ್ದಾರೆ.

"ಅವಳು ಸಹಾಯಕ್ಕಾಗಿ ಅಳುತ್ತಿದ್ದಳು. ನಾನು ಅವಳ ವಿವರ ಕೇಳಿದಾಗ ಆಕೆ ತನ್ನ ಹೆಸರು ಹೇಳಿದ್ದಳು. ಅವಳ ದೇಹ ಬೆಂಕಿಯಲ್ಲಿ ಅತಿಯಾಗಿ ಸುಟ್ಟುಹೋಗಿದ್ದರಿಂದ ನನಗೆ ಇನ್ನೂ ಭಯವಾಗಿತ್ತು. ಅಲ್ಲದೆ ಆಕೆ ಮಾಟಗಾತಿಯೇನಾದರೂ ಇರಬಹುದೆ ಎಂದು ನಾನು ಭಾವಿಸಿದ್ದೆ, ನಾನು ಆಕೆಯನ್ನು ಹೊಡೆಯಲು ಕೋಲು ಸಹ ತೆಗೆದುಕೊಂಡಿದ್ದೆ. ಆದರೆ ತುಸು ಸಮಯದ ಬಳಿಕ ಪೋಲೀಸರು ಆಗಮಿಸಿದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು"

ಏತನ್ಮಧ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಸಂಸ್ತ್ರಸ್ಥೆಯನ್ನು ದೆಹಲಿಯ ಆಸ್ಪತ್ರೆಗೆ ಸಾಗಿಸಲಾಗಿದೆ.ದೆ. ಶೇಕಡಾ 90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಸಂತ್ರಸ್ಥೆಯನ್ನು  ರಾಷ್ಟ್ರ ರಾಜಧಾನಿಗೆ ಕರೆದೊಯ್ಯಲು ಉತ್ತರ ಪ್ರದೇಶ ಸರ್ಕಾರ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಸಿವಿಲ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಹಸಿರು ಕಾರಿಡಾರ್ ರಚಿಸಿ ಅಲ್ಲಿಂದ ಏರ್ ಅಂಬ್ಯುಲೆನ್ಸ್ ಮೂಲಕ ಸಂಜೆ 6.30 ರ ಸುಮಾರಿಗೆ ಆಕೆಯನ್ನು ದೆಹಲಿಗೆ ಸಾಗಿಸಲಾಗುತ್ತದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp