ಭಾರತವನ್ನು ವೈದಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸಲು ರಾಷ್ಟ್ರಪತಿ ಕರೆ  

ಭಾರತವನ್ನು ವೈದ್ಯಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸುವುದನ್ನು ಮತ್ತು ಕಡಿಮೆ ವೆಚ್ಚದ ರೋಗ ಪತ್ತೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.

Published: 07th December 2019 08:35 PM  |   Last Updated: 07th December 2019 08:37 PM   |  A+A-


Ramanath_Kovind1

ರಾಮನಾಥ್ ಕೋವಿಂದ್

Posted By : Nagaraja AB
Source : UNI

ಜೋಧ್ ಪುರ: ಭಾರತವನ್ನು ವೈದ್ಯಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸುವುದನ್ನು ಮತ್ತು ಕಡಿಮೆ ವೆಚ್ಚದ ರೋಗ ಪತ್ತೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ. 

ಇಲ್ಲಿನ ಏಮ್ಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಎರಡನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತ, ಸ್ವಂತವಾಗಿ ಉಪಕರಣಗಳನ್ನು ತಯಾರಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದ ಕಡಿಮೆ ದರದಲ್ಲಿ ಆರೋಗ್ಯ ರಕ್ಷಣೆ ಸೇವೆಗಳು ಒದಗುವುದಲ್ಲದೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ವೈದ್ಯಕೀಯ ತಂತ್ರಜ್ಞಾನ ಕೇಂದ್ರವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.  

ವೈದ್ಯಕೀಯ ವಿದ್ಯಾರ್ಥಿಗಳು ಕನಿಕರ ಮನಸ್ಸು ಬೆಳೆಸಿಕೊಳ್ಳಬೇಕು. ಜನರ ಜೀವ ಉಳಿಸಲು ಮತ್ತು ಜನರ ಆರೋಗ್ಯ ಸುಧಾರಿಸಲು ತಮ್ಮ ಕೌಶಲ ಮತ್ತು ಜ್ಞಾನವನ್ನು ಬಳಸಿಕೊಳ್ಳಬೇಕು. ಇಡೀ ವೈದ್ಯ ವೃತ್ತಿ ಜೀವನದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು. ತಮ್ಮ ಸುತ್ತಲಿನ ಸಮಾಜ ಎಂದಿಗೂ ಮರೆಯಲಾಗದಂತೆ ಎಲ್ಲ ವೈದ್ಯರು ಮತ್ತು ನರ್ಸಿಂಗ್ ಪದವೀಧರರು ಸೇವೆಯನ್ನು ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp