ಅತ್ಯಾಚಾರ,ಪ್ರಕರಣ ವಿಚಾರಣೆಗಾಗಿ 218 ತ್ವರಿತ ನ್ಯಾಯಾಲಯ ಸ್ಥಾಪನೆಗೆ ಉತ್ತರ ಪ್ರದೇಶ ಸಂಪುಟ ತೀರ್ಮಾನ

ಮಕ್ಕಳ ಮೇಲಿನ ಅಪರಾಧ ಹಾಗೂ ತ್ಯಾಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ 218 ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ಸಚಿವ ಸಂಪುಟ ಸೋಮವಾರ ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಮಕ್ಕಳ ಮೇಲಿನ ಅಪರಾಧ ಹಾಗೂ ತ್ಯಾಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ 218 ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ಸಚಿವ ಸಂಪುಟ ಸೋಮವಾರ ಅಂಗೀಕರಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಕಾನೂನು ಸಚಿವ ಬ್ರಜೇಶ್ ಪಾಠಕ್ ಸುದ್ದಿಗಾರರಿಗೆ ತಿಳಿಸಿದರು.

ಮಕ್ಕಳ ಮೇಲಿನ ಅಪರಾಧ, ಅತ್ಯಾಚಾರ ಪ್ರಕರಣಗಳ  ವಿಚಾರಣೆಗೆ 218 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಉತ್ತರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ. ಈ ಪೈಕಿ 144 ನ್ಯಾಯಾಲಯಗಳು ಅತ್ಯಾಚಾರ ಪ್ರಕರಣಗಳನ್ನು ಆಲಿಸಲಿದ್ದು, 74 ನ್ಯಾಯಾಲಯಗಳು ಪೋಕ್ಸೊ ಪ್ರಕರಣಗಳನ್ನು ಆಲಿಸಲಿವೆ.  ಎಂದು ಸಚಿವರು ವಿವರಿಸಿದ್ದಾರೆ.

ಈ ತ್ವರಿತ ನ್ಯಾಯಾಲಯಗಳಿಗಾಗಿ, ಹೆಚ್ಚುವರಿ ಸ್ಥಳಹಾಗೂ 218 ಹೆಚ್ಚುವರಿ ನ್ಯಾಯಾಧೀಶರ ಹುದ್ದೆಮತ್ತು ನ್ಯಾಯಾಲಯಕ್ಕೆ ಸಿಬ್ಬಂದಿ ಹುದ್ದೆಗಳನ್ನು ಸಹ ರಚಿಸಲಾಗುತ್ತದೆ."ನ್ಯಾಯಾಲಯಗಳನ್ನು ನಡೆಸುವಲ್ಲಿನ ವೆಚ್ಚವನ್ನು, ಶೇಕಡಾ 60 ರಷ್ಟು ಕೇಂದ್ರವು ಭರಿಸಲಿದೆ, ಆದರೆ ರಾಜ್ಯ ಸರ್ಕಾರವು ಶೇಕಡಾ 40 ರಷ್ಟು ಖರ್ಚು ಮಾಡುತ್ತದೆ. ಪ್ರತಿ ಹೊಸ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳಿಗೆ ಅಂದಾಜು 63 ಲಕ್ಷ ರೂ ವೆಚ್ಚ ತಗುಲಲಿದೆ ಎಂದು ಪಾಠಕ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com