ಮಹಿಳೆಯರ ಮೇಲಿನ ಅಪರಾಧಕ್ಕೆ 21 ದಿನಗಳಲ್ಲೇ ಶಿಕ್ಷೆ, ದಿಶಾ ಕಾಯ್ದೆ ಅಂಗೀಕಾರಕ್ಕೆ ಮೆಗಾಸ್ಟಾರ್ ಮೆಚ್ಚುಗೆ!

ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಗಳು ನಡೆದ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸುವ ಮಹತ್ವದ  ಆಂಧ್ರಪ್ರದೇಶ ಅಪರಾಧ ಕಾನೂನು ( ತಿದ್ದುಪಡಿ) ದಿಶಾ ಕಾಯ್ದೆಯನ್ನು ಜಗನ್ ಮೋಹನ್ ಸಂಪುಟ ಅಂಗೀಕರಿಸುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಜಗನ್, ಚಿರಂಜೀವಿ
ಮುಖ್ಯಮಂತ್ರಿ ಜಗನ್, ಚಿರಂಜೀವಿ

ಅಮರಾವತಿ:  ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಗಳು ನಡೆದ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸುವ ಮಹತ್ವದ  ಆಂಧ್ರಪ್ರದೇಶ ಅಪರಾಧ ಕಾನೂನು ( ತಿದ್ದುಪಡಿ) ದಿಶಾ ಕಾಯ್ದೆಯನ್ನು ಜಗನ್ ಮೋಹನ್ ಸಂಪುಟ ಅಂಗೀಕರಿಸುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿಶಾ ಕಾಯ್ದೆ ಜಾರಿಯಿಂದ ಮಹಿಳೆಯರು ಸ್ವಾತಂತ್ರ್ಯದಿಂದ ಜೀವಿಸಬಹುದಾಗಿದೆ ಎಂದು ಚಿರಂಜೀವಿ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ಮೇಲಿನ ಘೋರ ಅಪರಾಧಗಳಲ್ಲಿ ತಪಿತಸ್ಥರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಲು ಈ ಕಾಯ್ದೆ ಅವಕಾಶ ನೀಡಲಿದೆ.

ಮಹಿಳೆಯರ ಮೇಲೆ ಅತ್ಯಾಚಾರ , ಆಸಿಡ್ ದಾಳಿ ಮತ್ತಿತರ ಹೀನ ಕೃತ್ಯಗಳು ನಡೆದ 14 ದಿನಗಳಲ್ಲಿಯೇ  ವೇಗವಾಗಿ ವಿಚಾರಣೆ ನಡೆಸಿ, ಘಟನೆ ನಡೆದ 21 ದಿನಗಳಲ್ಲೇ ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ನೀಡಲಿದೆ. ಆಂಧ್ರಪ್ರದೇಶ ರಾಜ್ಯದಲ್ಲಿನ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಜಗನ್ ಮೋಹನ್ ನೇತೃತ್ವದ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 

ಪೋಕ್ಸೊ ಕಾಯ್ದೆಯಡಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಆಂಧ್ರ ಸಂಪುಟ ಅನುಮೋದನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com