ಸಂಗ್ರಹ ಚಿತ್ರ
ದೇಶ
ಜಾರ್ಖಂಡ್ ವಿಧಾನಸಭೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ
ಇತ್ತೀಚೆಗೆ ಮುಕ್ತಾಯವಾದ ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ರಾಂಚಿ: ಇತ್ತೀಚೆಗೆ ಮುಕ್ತಾಯವಾದ ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಮೊದಲ ಹಂತದ ಮತದಾನದ ವೇಳೆ ನಕ್ಸಲು ಸೇತುವೆ ಸ್ಫೋಟಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
ಮತದಾನ ಬಹಿಷ್ಕರಿಸುವಂತೆ ಎಚ್ಚರಿಕೆ ನೀಡಿದ್ದ ನಕ್ಸಲೀಯರು ಮತದಾನಕ್ಕೆ ಅಡ್ಡಿಪಡಿಸಲೆಂದು ಗುಮ್ಲಾ ಜಿಲ್ಲೆಯ ಬಿಶ್ಣುಪುರ್ ನಲ್ಲಿರುವ ಸೇತುವೆಯನ್ನು ಸ್ಫೋಟಿಸಿದ್ದರು. ಹೀಗಾಗಿ ಮತ ಎಣಿಕೆ ಕಾರ್ಯಕ್ಕೂ ನಕ್ಸಲರು ಅಡ್ಡಿ ಪಡಿಸುವ ಭೀತಿ ಇದ್ದು, ಸಶಸ್ತ್ರ ಪಡೆ ಸಹಿತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಾರ್ಖಂಡ್ ನ ಒಟ್ಟು 81 ಸ್ಥಾನಗಳಿಗೆ ಐದು ಹಂತಗಳಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20ರವರೆಗೆ ಮತದಾನ ನಡೆದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ