ಸಂವಿಧಾನದ ಮೇಲೆ ದಾಳಿ ಮಾಡಲು ಜನರು ಬಿಡಲ್ಲ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ದ್ವೇಷವನ್ನು ಹರಡಲು ಹಾಗೂ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ,  ಅವರು ಸಂವಿಧಾನದ ಮೇಲೆ ದಾಳಿ ಮಾಡಲು,  ಭಾರತ ಮಾತೆಯ ಧ್ವನಿಯನ್ನು ಅಡಗಿಸಲು ಜನರು ಅವಕಾಶ ಮಾಡಿಕೊಡಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದ್ವೇಷವನ್ನು ಹರಡಲು ಹಾಗೂ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ,  ಅವರು ಸಂವಿಧಾನದ ಮೇಲೆ ದಾಳಿ ಮಾಡಲು,  ಭಾರತ ಮಾತೆಯ ಧ್ವನಿಯನ್ನು ಅಡಗಿಸಲು ಜನರು ಅವಕಾಶ ಮಾಡಿಕೊಡಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ

ಮೋದಿ ನೇತೃತ್ವದ ಸಂಘಟನೆ ದೇಶವನ್ನು ಹೇಗೆ ಒಡೆಯುವುದು ಮತ್ತು ದ್ವೇಷವನ್ನು ಹೇಗೆ ಹರಡುವುದು ಎಂಬ ಬಗ್ಗೆ ಕಲಿಸಿದೆ. ಹೀಗೆ ಮಾಡುವಲ್ಲಿ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ಜಾರಿ ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್ ಬಳಿ ನಡೆದ ಏಕತೆಗಾಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಯುವಕರು ಏಕೆ ಉದ್ಯೋಗ ಪಡೆಯುತ್ತಿಲ್ಲ,  ವಿದ್ಯಾರ್ಥಿಗಳ ಧ್ವನಿಯನ್ನು ಏಕೆ ಅಡಗಿಸಲಾಗುತ್ತಿದೆ ಎಂಬುದರ ಬಗ್ಗೆ ದೇಶಕ್ಕೆ ಮೋದಿ ತಿಳಿಸಬೇಕಾಗಿದೆ ಎಂದು ಆಗ್ರಹಿಸಿದರು. 

ದೇಶದ ಪ್ರಗತಿಯನ್ನು ತಡೆಯಲು ನಮ್ಮ ಶತ್ರುಗಳು ಏನನ್ನೂ ಮಾಡಲಿಲ್ಲವೋ ಅದನ್ನು ಈಗ ಮೋದಿ ಮಾಡುತ್ತಿದ್ದಾರೆ. ನೀವು ಉದ್ಯೋಗ ಒದಗಿಸಲಿಲ್ಲ,ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಇದೇ ನಮ್ಮ ಬಲವಾಗಿದೆ. ಆದ್ದರಿಂದ ನೀವು ದ್ವೇಷದ ಹಿಂದೆ ಅಡಗಿದ್ದೀರಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com