ಬಿಜೆಪಿ ಏನೇ ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್‍ನಿಂದ ವಿರೋಧ- ಶೋಭಾ ಕರಂದ್ಲಾಜೆ

ಬಡವರಿಗೆ ಒಳಿತಾಗುವ, ದೇಶದ ಹಿತದೃಷ್ಟಿಯ ಬಿಜೆಪಿ ಮಾಡುವ ಎಲ್ಲ ಕೆಲಸಗಳನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 
ಬಿಜೆಪಿ ಏನೇ ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್‍ನಿಂದ ವಿರೋಧ- ಶೋಭಾ ಕರಂದ್ಲಾಜೆ
ಬಿಜೆಪಿ ಏನೇ ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್‍ನಿಂದ ವಿರೋಧ- ಶೋಭಾ ಕರಂದ್ಲಾಜೆ

ಬೆಂಗಳೂರು: ಬಡವರಿಗೆ ಒಳಿತಾಗುವ, ದೇಶದ ಹಿತದೃಷ್ಟಿಯ ಬಿಜೆಪಿ ಮಾಡುವ ಎಲ್ಲ ಕೆಲಸಗಳನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆ ಒಟ್ಟಾರೆ ಕಾಯ್ದೆ ಕುರಿತ ಹೋರಾಟ ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್ ವಿರೋಧಿಸುತ್ತದೆ. 

ರಾಮಮಂದಿರ, ಆಧಾರ್–ವೋಟರ್ ಐಡಿ ಲಿಂಕ್‍ಗೆ, ತ್ರಿವಳಿ ತಲಾಖ್, ಪೌರತ್ವ ತಿದ್ದುಪಡಿ ಕಾಯ್ದೆ, ಜಿಎಸ್‍ಟಿ, ಮಹಿಳಾ ಮೀಸಲಾತಿ, ನೋಟು ಅಮಾನ್ಯೀಕರಣ, ರಫೇಲ್, 370ನೇ ವಿಧಿ, ಇವಿಎಂ, ಬೇನಾಮಿ ಆಸ್ತಿ, ನಗರ ನಕ್ಸಲರ ಬಂಧನ, ಬಡವರಿಗೆ ಆಶಾಕಿರಣವಾಗಿರುವ ಆಯುಷ್ಮಾನ್ ಭಾರತ್ ಸೇರಿದಂತೆ ಎಲ್ಲದ್ದಕ್ಕೂ ಕಾಂಗ್ರೆಸ್ ವಿರೋಧಿಸಿದೆ. ಗ್ರಹಣ ಹಿಡಿದಿರುವುದು ಸೂರ್ಯನಿಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಗ್ರಹಣ ಹಿಡಿದಿದೆ ಎಂದು ಹೇಳಿದರು.  

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಿಷಯವನ್ನೂ ಎತ್ತಿ ಮತ್ತೊಂದು ಗೊಂದಲ ಸೃಷ್ಟಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ. ಆದರೆ, 2010ರಲ್ಲಿ ಕಾಂಗ್ರೆಸ್ ಇದನ್ನು ಆರಂಭಿಸಿತ್ತು. ಜನಗಣತಿಗೆ ಮುನ್ನ ನಡೆಯುವ ಪ್ರಕ್ರಿಯೆ ಇದಾಗಿದೆ. ಇದರಿಂದ ಜನಸಂಖ್ಯೆ, ಜನರ ಸಾಮಾಜಿಕ, ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಯಲಿದೆ. 2011ರ ಜನಗಣತಿ ಪಟ್ಟಿಯಲ್ಲಿ ಕೈಬಿಟ್ಟ ಬಿಪಿಎಲ್ ಕುಟುಂಬಗಳವರನ್ನು ಪಟ್ಟಿಗೆ ಸೇರಿಸಲು ಸಹಕಾರಿಯಾಗಲಿದೆ.  2021ರ ಜನಗಣತಿಯಲ್ಲಿ ಹಿಂದಿನ ಲೋಪಗಳನ್ನು ಸರಿಪಡಿಸಲು ಅವಕಾಶವಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿರುವವರನ್ನು ಪತ್ತೆ ಮಾಡಿ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು. ತನಿಖೆಯಿಂದ ಘಟನೆ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಕರಾವಳಿಯಲ್ಲಿ ಕೇರಳದ ಪರಿಸ್ಥಿತಿ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದಿರುವ ಶಕ್ತಿಗಳನ್ನೂ ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳು ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟವರಿಗೆ ಪರಿಹಾರ ನೀಡುತ್ತಿರುವುದಾಗಿ ಗೊತ್ತಾಗಿದೆ. 

ಆದರೆ, ಕೇರಳದಲ್ಲಿ ವರ್ಷಕ್ಕೆ 20ರಿಂದ 30 ಹಿಂದೂ ಕಾರ್ಯಕರ್ತರು ಹತ್ಯೆಯಾದರೂ ಯಾರಿಗೂ ಪರಿಹಾರ ನೀಡದ ಅಲ್ಲಿನ ಸರ್ಕಾರ  ಒಂದು ಕೋಮು ಓಲೈಸುವುದಕ್ಕೆ ಇಂತಹ ನಾಟಕ ಆಡುತ್ತಿದೆ. ಕೇರಳದ ಭೇಟಿಗೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ವಾಸ್ತವವಾಗಿ ಅಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕೇರಳದ ಮುಖ್ಯಮಂತ್ರಿಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರಿಗೆ ತನಿಖೆ ನಂತರವೇ ಪರಿಹಾರ ನೀಡಲಾಗುವುದು. ಸರ್ಕಾರದ ನಿರ್ಧಾರ ಸಮಯೋಚಿತವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ವಲಸೆ ಬಂದ ಎಲ್ಲರಿಗೂ ನೆಲೆ ನೀಡಲು ಭಾರತ ಧರ್ಮ ಛತ್ರವಲ್ಲ. ರಾಹುಲ್‍ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ವಿದೇಶಗಳಿಗೆ ಹೋಗಿ ವೀಸಾ ಅವಧಿ ಮೀರಿ ನೆಲೆಸಲಿ. ಆಗ ಅವರಿಗೆ ಪರಿಸ್ಥಿತಿ ಏನೆಂಬುದು ಗೊತ್ತಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com