ನನಗೇನಾದರೂ ಆದರೆ ಅದಕ್ಕೆ ಜನರು ಮೋದಿಯನ್ನು ಹೊಣೆಯಾಗಿಸುತ್ತಾರೆ: ಅಣ್ಣಾ ಹಜಾರೆ

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಲೋಕಪಾಲ ಮಸೂದೆಗಾಗಿ ಆಗ್ರಹಿಸಿ ಮತ್ತೊಮ್ಮೆ ನಿರಶನ ಪ್ರಾರಂಭಿಸಿದ್ದು, ತಮಗೇನಾದರೂ ಆದಲ್ಲಿ ಅದಕ್ಕೆ ಜನರು ಮೋದಿಯನ್ನೇ ಹೊಣೆಯಾಗಿಸುತ್ತಾರೆ
ನನಗೇನಾದರೂ ಆದರೆ ಅದಕ್ಕೆ ಜನರು ಮೋದಿಯನ್ನು ಹೊಣೆಯಾಗಿಸುತ್ತಾರೆ: ಅಣ್ಣಾ ಹಜಾರೆ
ನನಗೇನಾದರೂ ಆದರೆ ಅದಕ್ಕೆ ಜನರು ಮೋದಿಯನ್ನು ಹೊಣೆಯಾಗಿಸುತ್ತಾರೆ: ಅಣ್ಣಾ ಹಜಾರೆ
ರಾಲೆ ಗಣ್ ಸಿದ್ದಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಲೋಕಪಾಲ ಮಸೂದೆಗಾಗಿ ಆಗ್ರಹಿಸಿ ಮತ್ತೊಮ್ಮೆ ನಿರಶನ ಪ್ರಾರಂಭಿಸಿದ್ದು, ತಮಗೇನಾದರೂ ಆದಲ್ಲಿ ಅದಕ್ಕೆ ಜನರು ಮೋದಿಯನ್ನೇ ಹೊಣೆಯಾಗಿಸುತ್ತಾರೆ ಎಂದು ಹೇಳಿದ್ದಾರೆ. 
ಎಎನ್ಐ ನೊಂದಿಗೆ ಮಾತನಾಡಿರುವ ಅಣ್ಣಾ ಹಜಾರೆ, ಜನರು ನನ್ನನ್ನು ಪರಿಸ್ಥಿತಿಗಳನ್ನು ನಿಭಾಯಿಸಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆಯೇ ಹೊರತು ಉರಿಯುತ್ತಿರುವ ಬೆಂಕಿಯನ್ನು ಮತ್ತಷ್ಟು ಉತ್ತೇಜಿಸಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುವುದಿಲ್ಲ. ನನಗೆ ಏನೇ ಆದರೂ ಜನರು  ಅದಕ್ಕೆ ಮೋದಿಯನ್ನೇ ಹೊಣೆಯಾಗಿಸುತ್ತಾರೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. 
ಜನ್ ಆಂಧೋಲನ್ ಸತ್ಯಾಗ್ರಹದ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜ.30 ರಿಂದ ನಿರಶನ ಪ್ರಾರಂಭಿಸಿದ್ದು, ಲೋಕಾಯುಕ್ತ, ಲೋಕಪಾಲ್ ನ್ನು ಜಾರಿಗೆ ತರಲು ಆಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com