ನನಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ: ರಾಹುಲ್ 'ಗಟ್ಸ್' ಟ್ವೀಟ್ ಗೆ ಗಡ್ಕರಿ ತಿರುಗೇಟು!

ನನಗೆ ಕಾಂಗ್ರೆಸ್ ಅಧ್ಯಕ್ಷರ ಕಡೆಯಿಂದ ನನ್ನ ದಿಟ್ಟತನದ ಬಗ್ಗೆ ಯಾವುದೇ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Published: 04th February 2019 12:00 PM  |   Last Updated: 04th February 2019 11:59 AM   |  A+A-


'Don't need your certificate': Gadkari pans Rahul, prompts 'huge apology'

ನನಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ: ರಾಹುಲ್ 'ಗಟ್ಸ್' ಟ್ವೀಟ್ ಗೆ ಗಡ್ಕರಿ ತಿರುಗೇಟು!

Posted By : RHN RHN
Source : Online Desk
ನವದೆಹಲಿ: ನನಗೆ ಕಾಂಗ್ರೆಸ್ ಅಧ್ಯಕ್ಷರ ಕಡೆಯಿಂದ ನನ್ನ ದಿಟ್ಟತನದ ಬಗ್ಗೆ ಯಾವುದೇ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

"ಮನೆಯವರ ಬಗ್ಗೆ ಕಾಳಜಿ ವಹಿಸದವರು ದೇಶ ನಿರ್ವಹಿಸಲಾರರು" ಎಂದಿದ್ದ ಗಡ್ಕರಿ ಬಿಜೆಪಿಯಲ್ಲಿ ಗಟ್ಸ್ ಇರೋ ಏಕೈಕ ನಾಯಕ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದ ಬೆನ್ನಲ್ಲೇ ನಿತಿನ್ ಗಡ್ಕರಿ ಈ ಪ್ರತಿಕ್ರಿಯೆ ನಿಡಿದ್ದಾರೆ.

"ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಮಾಧ್ಯಮಗಳು ತಿರುಚಿದ ವರದಿಯನ್ನು ಅವಲಂಬಿಸಿದ್ದಾರೆ ಎಂದು ಗಡ್ಕರಿ ಆರೋಪಿಸಿದ್ದು ಲೋಕಸಭಾ ಚುನಾವಣೆ ನಂತರ ಮತ್ತೊಮ್ಮೆ ಎನ್ ಡಿಎ ಅಧಿಕಾರಕ್ಕೆ ಬರಲಿದೆ. ದೇಶವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಲು ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಲಿದೆ ಎಂದು ಅವರು ಹೇಳಿದರು

"ರಾಹುಲ್ ಜಿ, ನಿಮ್ಮಿಂದ ನನಗೆ ಧೈರ್ಯದ ಕುರಿತ ಪ್ರಮಾಣಪತ್ರದ ಅಗತ್ಯವಿಲ್ಲ.ಆದರೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ, ನಮ್ಮ ಸರ್ಕಾರವನ್ನು ಟೀಕಿಸಲು ಮಾದ್ಯಮಗಳು ತಿರುಚಿರುವ ವರದಿಯನ್ನು ಅವಲಂಚಿಸಿದ್ದೀರಿ.

"ಮೋದಿಯವರ ಸಾಮರ್ಥ್ಯವೇ ಇದು, ನೀವು ಅವರ ಸರ್ಕಾರವನ್ನು ಟೀಕಿಸಲು ಇತರರ ನೆರವನ್ನು ಪಡೆಯಬೇಕಾಗಿದೆ." ಗಡ್ಕರಿ ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.

"ನೀವೆಂದದ ಹಾಗೆ ರಾಫೆಲ್ ಒಪ್ಪಂದದ ಬಗ್ಗೆ ಹೇಳುವುದಾದರೆ ರಾಫೆಲ್ ವ್ಯವಹಾರವವು ಭವಿಷ್ಯದ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಿದೆ.ಮೋದಿಯವರ ಪ್ರಾಮಾಣಿಕ ನೀತಿಗಳು ನಿಮ್ಮ (ಕಾಂಗ್ರೆಸ್) ನೀತಿಗಳಿಂದಾದ ಬಿಕ್ಕಟ್ಟ್ನಿಂದ ರೈತರನ್ನು ಪಾರು ಮಾಡಲಿದೆ.

“ಮೋದಿ ಅವರು ಪ್ರಧಾನಿಯಾಗಿರುವುದು ನಿಮಗೆ ಸಹಿಸಲಾಗುವುದಿಲ್ಲ.ಹಾಗಾಗಿ ನೀವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವ ಕನಸುಗಳನ್ನು ಕಾಣುತ್ತಿದ್ದೀರಿ. ರಾಹುಲ್ ಗಾಂಧಿಯವರು ಭವಿಷ್ಯದಲ್ಲಿ ತರ್ಕಬದ್ಧತೆ ಮತ್ತು ಜವಾಬ್ದಾರಿಯೊಂದಿಗೆ ವರ್ತಿಸುವರು ಎಂದು ಣಾನು ಬಯಸುತೇನೆ” ಗಡ್ಕರಿ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp