ಛತ್ತೀಸ್ ಗಡ: ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ 10 ನಕ್ಸಲೀಯರ ಹತ್ಯೆ

ಛತ್ತೀಸ್ ಗಡದ ಬಿಜಾಪುರದ ಬಳಿ ಇಂದು ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ 10 ನಕ್ಸಲೀಯರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಿಜಾಪುರ: ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ 10 ನಕ್ಸಲೀಯರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.

ಬೈರಾಮ್ ಗಡ ಪೊಲೀಸ್ ಠಾಣೆಯಿಂದ 22 ಕಿಲೋ ಮೀಟರ್ ದೂರದಲ್ಲಿರುವ ಬೊರ್ಗಾ ಟಾಕಿಲೊಡ್ ಗ್ರಾಮದ ಬಳಿಯ ನಕ್ಸಲ್ ಕ್ಯಾಂಪಿನ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಾಚರಣೆ ಪಡೆಗಳಿಂದ ಜಂಟಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ನಕ್ಸಲೀಯರು ಹಾಗೂ ಭದ್ರತಾ ಪಡೆಗಳ ನಡುವಣ ಗುಂಡಿನ ಕಾಳಗ ನಡೆದಿದ್ದು, ಎನ್ ಕೌಂಟರ್ ಬಳಿಕ 10 ನಕ್ಸಲೀಯರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಮೊಹಿತ್ ಗಾರ್ಗ್  ಸ್ಪಷ್ಟಪಡಿಸಿದ್ದಾರೆ.

ಎನ್ ಕೌಂಟರ್ ನಡೆದ ಪ್ರದೇಶದಲ್ಲಿ 10 ರೈಪಲ್ಸ್,  ಒಂದು ಪಿಸ್ತೂಲ್, ಮತ್ತಿತರ ಸ್ಪೋಟಕ್ಕೆ ಸಂಬಂಧಿಸಿದ ಸಾಧನ ಸಲಕರಣೆಗಳನ್ನು  ವಶಪಡಿಸಿಕೊಳ್ಳಲಾಗಿದೆ. ಆದರೆ, ಕಾರ್ಯಾಚರಣೆ ವೇಳೆಯಲ್ಲಿ ಭದ್ರತಾ ಪಡೆಯ ಯಾವುದೇ  ಸಿಬ್ಬಂದಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com