ಬಂಗಾಳದ 92 ವರ್ಷದ ಪಾದ್ರಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ!

:92 ವರ್ಷ ಪ್ರಾಯದ ಬಂಗಾಳಿ ಪಾದ್ರಿ ಫಾದರ್ ಫ್ರಾಂಕೋಯಿಸ್ ಲ್ಯಾಬೋರ್ಡ್ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೆಜಿಯನ್ ಡಿ'ಹೊನ್ನೆರ್ (ಲೀಜನ್ ಆಫ್ ಆನರ್) ಗೌರವಕ್ಕೆ ಪಾತ್ರರಾಗಿದ್ದಾರೆ.
ಬಂಗಾಳದ 92 ವರ್ಷದ ಪಾದ್ರಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ!
ಬಂಗಾಳದ 92 ವರ್ಷದ ಪಾದ್ರಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ!
ಹೌರಾ(ಪಶ್ಚಿಮ ಬಂಗಾಳ) :92 ವರ್ಷ ಪ್ರಾಯದ ಬಂಗಾಳಿ ಪಾದ್ರಿ ಫಾದರ್ ಫ್ರಾಂಕೋಯಿಸ್ ಲ್ಯಾಬೋರ್ಡ್ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೆಜಿಯನ್ ಡಿ'ಹೊನ್ನೆರ್ (ಲೀಜನ್ ಆಫ್ ಆನರ್) ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತದ ಫ್ರೆಂಚ್ ರಾಯಭಾರಿ  ಅಲೆಕ್ಸಾಂಡ್ರೆ ಝೈಗ್ಲರ್, ವಿಶೇಷವಾಗಿ ಮಕ್ಕಳ ಅಭಿವೃದ್ದಿಗೆ ಕೆಲಸ ಮಾಡುತ್ತಿರುವ ಹೌರಾ ಸೌತ್ ಪಾಯಿಂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಫಾದರ್ ಫ್ರಾಂಕೋಯಿಸ್ ಅವರಿಗೆ ಪ್ರಶಸ್ತಿ ನೀಡುತ್ತಿರಿಉದು ಸಂತಸ ತಂದಿದೆ ಎಂದಿದ್ದಾರೆ.
"ಅವರು ಅರವತ್ತು ವರ್ಷಗಲಿಂದ ಬಡ, ನಿರ್ಗತಿಕ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ವಯಸ್ಸಿನಲ್ಲಿಯೂ ಅವರು ಇನ್ನೂ ಉತ್ತಮ ಕಾರ್ಯಚಟುವಟಿಕೆಯಿಂದಿದ್ದಾರೆ.ಈ ಮೂಲಕ ನಮ್ಮೆಲ್ಲರಿಗೆಸ್ಪೂರ್ತಿಯಾಗಿದ್ದಾರೆ" ಫ್ರೆಂಚ್ ರಾಯಭಾರಿ ಹೇಳಿದ್ದಾರೆ.
ಇದೇ ವೇಳೆ ತಾನು ಈ ಪ್ರಶಸ್ತಿಯನ್ನು ಬಡ, ನಿರ್ಗತಿಕ ಮಕ್ಕಳಿಗೆ ಸಮರ್ಪಿಸಿದ್ದೇನೆ ಎಂದು ಫಾದರ್ ಫ್ರಾಂಕೋಯಿಸ್ ಹೇಳಿದ್ದಾರೆ. ಫಾದರ್ ಲ್ಯಾಬೋರ್ಡ್ ಫ್ರೆಂಚ್ ಮೂಲದವರಾಗಿದ್ದರೂ ಅವರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಸಿನಿಮಾ ಕ್ಷೇತ್ರದ ದಂತಕಥೆ ಸತ್ಯಜಿತ್ ರೇ ಮತ್ತು ನಟ ಸೌಮಿತ್ರಾ ಚಟರ್ಜಿಯವರ ನಂತರ ಲೀಜನ್ ಆಫ್ ಆನರ್ ಪ್ರಶಸ್ತಿ ಪಡೆದ  ಮೂರನೇ ಬಂಗಾಲಿ ವ್ಯಕ್ತಿ ಇವರಾಗಿದ್ದಾರೆ.
ರೇ ಅವರಿಗೆ 1987ರಲ್ಲಿ ಈ ಪ್ರಶಸ್ತಿ ಲಭಿಸಿದ್ದರೆ ಕಳೆದ ವರ್ಷ ಸೌಮಿತ್ರಾ ಚಟರ್ಜಿ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು.ಡಾ ಫಾದರ್ ಲ್ಯಾಬೋರ್ಡ್ ಅವರ ಕಾರ್ಯಕ್ಷೇತ್ರಕ್ಕೆ ಸಹ ಫ್ರೆಂಚ್ ರಾಯಭಾರಿ ಭೇಟಿ ನೀಡಿ ಸಂತಸಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com