ಶಾಸಕ ಮೇವಾನಿ ಅತಿಥಿಯಾಗಿದ್ದ ಕಾರ್ಯಕ್ರಮ ರದ್ದು, ಪ್ರಿನ್ಸಿಪಾಲ್ ರಾಜೀನಾಮೆ

ದಲಿತ ನಾಯಕ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರು ಮುಖ್ಯ ಅತಿಥಿಯಾಗಿದ್ದ, ಅವರು ಓದಿದ್ದ ಕಾಲೇಜ್ ನ ವಾರ್ಷಿಕೋತ್ಸವ...

Published: 11th February 2019 12:00 PM  |   Last Updated: 11th February 2019 09:05 AM   |  A+A-


MLA Jignesh Mevani's college trust cancels his event; principal quits in protest

ಶಾಸಕ ಜಿಗ್ನೇಶ್ ಮೇವಾನಿ

Posted By : LSB LSB
Source : PTI
ಅಹಮದಾಬಾದ್: ದಲಿತ ನಾಯಕ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರು ಮುಖ್ಯ ಅತಿಥಿಯಾಗಿದ್ದ, ಅವರು ಓದಿದ್ದ ಕಾಲೇಜ್ ನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕಾಲೇಜ್ ಆಡಳಿತ ಮಂಡಳಿ ಸೋಮವಾರ ದಿಢೀರ್ ರದ್ದುಗೊಳಿಸಿದೆ. 

ಕಾರ್ಯಕ್ರಮ ರದ್ಜುಗೊಳಿಸಿದ ಎಚ್ ಕೆ ಆರ್ಟ್ಸ್ ಕಾಲೇಜ್ ನ ಬ್ರಹ್ಮಾಚಾರಿ ವದಿ ಟ್ರಸ್ಚ್ ನಿರ್ಧಾರ ಖಂಡಿಸಿ ಕಾಲೇಜ್ ಪ್ರಾಚಾರ್ಯ ಹೇಮಂತ್ ಶಾಹ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಲೇಜ್ ಆಡಳಿತ ಮಂಡಳಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಪ್ರಾಚಾರ್ಯರು ದೂರಿದ್ದಾರೆ.

ಜಿಗ್ನೇಶ್ ಮೇವಾನಿ ಅವರು ಈ ಕಾಲೇಜ್ ನ ಹಳೆ ವಿದ್ಯಾರ್ಥಿಯಾಗಿದ್ದು, ಕಾಲೇಜ್ ನ ಆಡಿಟೋರಿಯಂ ನಲ್ಲಿ ನಡೆಯಬೇಕಿದ್ದ ವಾರ್ಷಿಕೋತ್ಸವವನ್ನು ರದ್ದುಗೊಳಿಸಲಾಗಿದೆ.

ಅಹಮದಾಬಾದ್ ನ ಎಚ್ ಕೆ ಆರ್ಟ್ಸ್ ಕಾಲೇಜ್ ಟ್ರಸ್ಟ್ ಗೆ ಬಿಜೆಪಿ ಗೂಂಡಾಗಳು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವವನ್ನು ರದ್ದುಗೊಳಿಸಲಾಗಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನ್ನ ಬೆಂಬಲಕ್ಕೆ ನಿಂತ ಪ್ರಿನ್ಸಿಪಾಲ್ ಹೇಮಂತ್ ಶಾಹ್ ಅವರಿಗೆ ವಂದಿಸುತ್ತೇನೆ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp