ಸಂಸತ್ ಅನುಮತಿ ಇಲ್ಲದೆ ಹಣಕಾಸು ಸಚಿವಾಲಯದಿಂದ 1157 ಕೋಟಿ ರು. ಖರ್ಚು: ಸಿಎಜಿ ವರದಿ

ಹಣಕಾಸು ಸಚಿವಾಲಯ 2017-18ರ ಅವಧಿಯಲ್ಲಿ ಸಂಸತ್ತಿನ ಅನುಮೋದನೆ ಪಡೆಯದೇ 1157 ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಮಹಾಲೇಖ ಮತ್ತು....
ಹಣಕಾಸು ಸಚಿವ ಅರುಣ್ ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ಹಣಕಾಸು ಸಚಿವಾಲಯ 2017-18ರ ಅವಧಿಯಲ್ಲಿ ಸಂಸತ್ತಿನ  ಅನುಮೋದನೆ ಪಡೆಯದೇ 1157 ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಮಹಾಲೇಖ ಮತ್ತು ಲೆಕ್ಕಪರಿಶೋಧಕ(ಸಿಎಜಿ) ವರದಿ ಮಂಗಳವಾರ ತಿಳಿಸಿದೆ.
ಸಿಎಜಿ ವರದಿಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಸಂಸತ್ತಿನ ಅನುಮೋದನೆ ಪಡೆಯದೆ 2017-18ರ ಅವಧಿಯಲ್ಲಿ 1,156.80 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಕೇಂದ್ರ ಸರ್ಕಾರದ ಹಣಕಾಸು ಲೆಕ್ಕ ಪರಿಶೋಧನಾ ವರದಿ ಹೇಳಿದೆ.
ಹಣಕಾಸು ಸಚಿವಾಲಯ ಹೊಸ ಸೇವಾ / ಹೊಸ ಸಲಕರಣೆಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಲಿಲ್ಲ, ಇದು ಹೆಚ್ಚುವರಿ ಖರ್ಚಿಗೆ ಕಾರಣವಾಯಿತು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಹೆಚ್ಚುವರಿ ವೆಚ್ಚಕ್ಕೆ ಶಾಸಕಾಂಗದ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಫೆಲ್‌ ಒಪ್ಪಂದದ ಕುರಿತು ಸಿಎಜಿ ವರದಿಯ ವಿವರ ಇನ್ನು ಲಭ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com