16ನೇ ಲೋಕಸಭೆಗೆ ಸ್ಪೀಕರ್ ಸುಮಿತ್ರಾ ಮಹಾಜನ್‌ ಅವರಿಂದ ಭಾವಪೂರ್ಣ ವಿದಾಯ

16ನೇ ಲೋಕಸಭೆಯನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
16ನೇ ಲೋಕಸಭೆಗೆ ಸ್ಪೀಕರ್ ಸುಮಿತ್ರಾ ಮಹಾಜನ್‌ ಅವರಿಂದ ಭಾವಪೂರ್ಣ ವಿದಾಯ
16ನೇ ಲೋಕಸಭೆಗೆ ಸ್ಪೀಕರ್ ಸುಮಿತ್ರಾ ಮಹಾಜನ್‌ ಅವರಿಂದ ಭಾವಪೂರ್ಣ ವಿದಾಯ
ನವದೆಹಲಿ: 16ನೇ ಲೋಕಸಭೆಯನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 
ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಭಾವುಕರಾಗಿ, ಕಳೆದ 5 ವರ್ಷಗಳಲ್ಲಿ ಸದನದ ಕಾರ್ಯ ನಿರ್ವಹಣೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಬುಧವಾರ ತಮ್ಮ ಸಮಾರೋಪ ಭಾಷಣದಲ್ಲಿ ಮಾತನಾಡಿದ ಅವರು, 16ನೇ ಲೋಕಸಭೆ ಅವಧಿಯಲ್ಲಿ ಅನೇಕ ಐತಿಹಾಸಿಕ ಸನ್ನಿವೇಶಗಳು ನಡೆದಿವೆ ಎಂದು ಹೇಳಿದರು. ಅಟಲ್‌ ಬಿಹಾರಿ ವಾಜಪೇಯಿ, ಜಾರ್ಜ್‌ ಫರ್ನಾಂಡಿಸ್‌ ಸೇರಿದಂತೆ ಸದನದ ಮಾಜಿ ಸದಸ್ಯರನ್ನು ಸುಮಿತ್ರಾ ಮಹಾಜನ್‌ ಸ್ಮರಿಸಿದರು. 
16ನೇ ಲೋಕಸಭೆ 2014ರ ಮೇ.18ರಂದು ರಚನೆಗೊಂಡಿದ್ದು, ಮೊದಲ ಕಾರ್ಯಕಲಾಪ 2014ರ ಜೂನ್‌ 4ರಂದು ನಡೆದಿತ್ತು. ಸದನದಲ್ಲಿ ಇದವರೆಗೆ 331 ದಿನಗಳ ಕಾರ್ಯಕಲಾಪ ನಡೆದಿದೆ ಎಂದು ಅವರು ಹೇಳಿದರು. 
16ನೇ ಲೋಕಸಭೆ ಅವಧಿಯಲ್ಲಿ 219 ಮಸೂದೆಗಳನ್ನು ಮಂಡಿಸಲಾಗಿದೆ. ಇವುಗಳಲ್ಲಿ, ಕಪ್ಪು ಹಣ ನಿಗ್ರಹ ಮಸೂದೆ-2015, ದಿವಾಳಿ ಸಂಹಿತೆ-2016 ಪ್ರಮುಖವಾಗಿವೆ. ಜುಲೈನಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಸದನದಲ್ಲಿ 11 ತಾಸು ನಡೆದಿದೆ. ಲೋಕಸಭಾ ಸಚಿವಾಲಯವನ್ನು ಕಾಗದ ರಹಿತವಾಗಿ ಮಾಡುವ ಕ್ರಮಗಳ ಭಾಗವಾಗಿ ಇಪೋರ್ಟಲ್‌ ಸಹ ಆರಂಭಿಸಲಾಗಿದೆ. 
ಸಂಸತ್‌ ಗ್ರಂಥಾಲಯವನ್ನು ಡಿಜಟಲೀಕರಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.  
ಮೀರಾ ಕುಮಾರ್ ನಂತರ, ಸುಮಿತ್ರಾ ಮಹಾಜನ್‌ ಅವರು ಲೋಕಸಭೆಯ ಎರಡನೇ ಸಭಾಧ್ಯಕ್ಷರಾಗಿದ್ದಾರೆ. 76 ವರ್ಷದ ಸುಮಿತ್ರಾ ಮಹಾಜನ್‌ ಅವರು, ಮಧ್ಯಪ್ರದೇಶದ ಇಂದೋರ್‌ನಿಂದ 8ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 
ಲೋಕಸಭೆಗೆ ದೀರ್ಘಾವಧಿ ಪ್ರತಿನಿಧಿಸುತ್ತಿರುವ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com