ಪುಲ್ವಾಮಾ ದಾಳಿ: ಪಾಕ್ ರಾಯಭಾರಿಗೆ ಭಾರತ ತರಾಟೆ, ಶೀಘ್ರ ಪ್ರತಿದಾಳಿಯ ಎಚ್ಚರಿಕೆ

ಪುಲ್ವಾಮಾ ದಾಳಿ ಸಂಬಂಧ ಪಾಕಿಸ್ತಾನ ರಾಯಭಾರಿಯನ್ನು ಭಾರತೀಯ ವಿದೇಶಾಂಗ ಕಾರ್ಯಾಲಯಕ್ಕೆ ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ವಿಜಯ್‍ ಗೋಖಲೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪುಲ್ವಾಮಾ ದಾಳಿ ಸಂಬಂಧ ಪಾಕಿಸ್ತಾನ ರಾಯಭಾರಿಯನ್ನು ಭಾರತೀಯ ವಿದೇಶಾಂಗ ಕಾರ್ಯಾಲಯಕ್ಕೆ ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ವಿಜಯ್‍ ಗೋಖಲೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಭಾರತದ ಸೂಚನೆ ಮೇರೆಗೆ ಹಾಜರಾಗಿದ್ದ ಪಾಕಿಸ್ತಾನದ ಹೈಕಮಿಷನರ್ ಮೊಹಮದ್ ಅವರಿಗೆ, ಹೇಯ ದಾಳಿ ನಡೆಸಿದ ಉಗ್ರ ಸಂಘಟನೆ  ಜೈಸ್ -ಇ- ಮೊಹಮ್ಮದ್ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ತಮ್ಮ ಗಡಿಯೊಳಗೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ತಕ್ಷಣ ನಿಗ್ರಹಿಸದಿದ್ದರೆ ಕಠಿಣ ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಪುಲ್ವಾಮಾದಲ್ಲಿ ನಿನ್ನೆ ಸೈನಿಕರ ಆಶ್ರಯ ತಾಣದ ಮೇಲೆ ನಡೆದ ದಾಳಿಯಲ್ಲಿ ಸುಮಾರು 37 ಮೀಸಲು ಪಡೆಯ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಷ್‍-ಇ-ಮೊಹಮದ್ (ಜೆಇಎಂ) ದಾಳಿಯ ಹೊಣೆ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com