ಪುಲ್ವಾಮ ದಾಳಿ: ಯೋಧರ ಮೇಲಿನ ದಾಳಿಯ ನಡುವೆಯೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಕಿರಾತಕರು, ಅದನ್ನು ನಂಬಬೇಡಿ

ಪುಲ್ವಾಮದಲ್ಲಿ ಸಿಆರ್ ಪಿಎಫ್ ಮೇಲೆ ದಾಳಿ ನಡೆದ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುದ್ದಿ ಹರಡಿದೆ.
ಪುಲ್ವಾಮ ದಾಳಿ: ಯೋಧರ ಮೇಲಿನ ದಾಳಿಯ ನಡುವೆಯೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಕಿರಾತಕರು, ಅದನ್ನು ನಂಬಬೇಡಿ
ಪುಲ್ವಾಮ ದಾಳಿ: ಯೋಧರ ಮೇಲಿನ ದಾಳಿಯ ನಡುವೆಯೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಕಿರಾತಕರು, ಅದನ್ನು ನಂಬಬೇಡಿ
ನವದೆಹಲಿ: ಪುಲ್ವಾಮದಲ್ಲಿ ಸಿಆರ್ ಪಿಎಫ್ ಮೇಲೆ ದಾಳಿ ನಡೆದ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುದ್ದಿ ಹರಡಿದೆ. ಆದರೆ ಇದು ಸುಳ್ಳು ಸುದ್ದಿ, ದ್ವೇಷವನ್ನು ಹರಡುವುದಕ್ಕಾಗಿ ಹಬ್ಬಿಸಲಾಗುತ್ತಿದೆ ಎಂದು ಸಿಆರ್ ಪಿಎಫ್ ಸ್ಪಷ್ಟಪಡಿಸಿದೆ. 
ಭಯೋತ್ಪಾದಕ ದಾಳಿಯ ನಂತರ ಛಿದ್ರಗೊಂಡಿರುವ ಯೋಧರ ದೇಹದ ಫೋಟೊಗನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೈಕಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಕೆಲವೊಂದು ನಕಲಿ ಫೋಟೋಗಳೂ ಇದ್ದು, ಜನತೆ ಈ ರೀತಿಯದ್ದನ್ನು ಕಂಡಲ್ಲಿ ಹಂಚಿಕೊಳ್ಳದೇ ಅದನ್ನು ಕೂಡಲೇ  webpro@crpf.gov.in ಎಂಬ ಇಮೇಲ್ ಖಾತೆಗೆ ವಿವರಗಳನ್ನು ಕಳಿಸಬೇಕೆಂದು ಸಿಆರ್ ಪಿಎಫ್ ಮನವಿ ಮಾಡಿದೆ.
ಇನ್ನು ಇದೇ ವೇಳೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೆ ಈ ಮಾಹಿತಿಯನ್ನೂ ಸಿಆರ್ ಪಿಎಫ್ ಹೆಲ್ಪ್ ಲೈನ್ ಪರಿಶೀಲಿಸಿದ್ದು ಈ ರೀತಿಯ ಮಾಹಿತಿ ನೈಜವಾದದ್ದಲ್ಲ, ಸುಳ್ಳು ಸುದ್ದಿ ಎಂಬುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಜನರು ನಂಬಬಾರದೆಂದು ಸಿಆರ್ ಪಿಎಫ್ ಸಲಹೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com