ಆಜಾದ್ ಕಾಶ್ಮೀರ ಬೆಂಬಲಿಸಿ ಭಿತ್ತಿಪತ್ರ: ಇಬ್ಬರು ಕೇರಳ ವಿದ್ಯಾರ್ಥಿಗಳ ಬಂಧನ

"ಸ್ವತಂತ್ರ ಕಾಶ್ಮೀರ ೯/ಆಜಾದ್ ಕಾಶ್ಮೀರ)" ಬೆಂಬಲಿಸಿ ಪೋಸ್ಟರ್ ಹಂಚುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.
ಆಜಾದ್ ಕಾಶ್ಮೀರ ಬೆಂಬಲಿಸಿ ಭಿತ್ತಿಪತ್ರ: ಇಬ್ಬರು ಕೇರಳ ವಿದ್ಯಾರ್ಥಿಗಳ ಬಂಧನ
ಆಜಾದ್ ಕಾಶ್ಮೀರ ಬೆಂಬಲಿಸಿ ಭಿತ್ತಿಪತ್ರ: ಇಬ್ಬರು ಕೇರಳ ವಿದ್ಯಾರ್ಥಿಗಳ ಬಂಧನ
ಮಲಪ್ಪುರಂ(ಕೇರಳ): "ಸ್ವತಂತ್ರ ಕಾಶ್ಮೀರ ೯/ಆಜಾದ್ ಕಾಶ್ಮೀರ)" ಬೆಂಬಲಿಸಿ ಪೋಸ್ಟರ್ ಹಂಚುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.
ಬಂಧಿತರನ್ನು ಮೊಹಮ್ಮದ್ ರಿನ್ಶಾದ್ (20) ಹಾಗೂ ಮೊಹಮ್ಮದ್ ಫರೀಸ್ (18) ಏಂದು ಗುರುತಿಸಲಾಗಿದ್ದು ಇವರು ಮಲಪ್ಪುರಂ ನಸರ್ಕಾರಿ ಕಾಲೇಜು ವಿದ್ಯಾರ್ಥಿಗಳೆನ್ನಲಾಗಿದೆ.
ರಿನ್ಶಾದ್ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರೆ ಫರಿಸ್ ಮೊದಲ ವರ್ಷದಲ್ಲಿ ಕಲಿಯುತ್ತಿದ್ದನು.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 (ದೇಶದ್ರೋಹ)ಅಡಿಯಲ್ಲಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ.
"ಪುಲ್ವಾಮಾ ಘಟನೆಯ ನಂತರ ವಿದ್ಯಾರ್ಥಿಗಳು ಕಾಶ್ಮೀರಕ್ಕೆ ಸ್ವಾತಂತ್ರ್ಯ, ಮಣಿಪುರಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಸೂಚಿಸುವ ಭಿತ್ತಿಪತ್ರಗಳನ್ನು ಕಾಲೇಜು ಕ್ಯಾಂಪಸ್ ನಲ್ಲಿ ಅಂಟಿಸುವುದು, ಹಂಚುವುದು ಮಾಡುತ್ತಿದ್ದರು."ಪೊಲೀಸರು ಹೇಳಿದ್ದಾರೆ.
"ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ದೂರಿತ್ತಿದ್ದರು.ಆ ದೂರಿನ ಬಳಿಕ ನಾವು ಇಬ್ಬರನ್ನು ಬಂಧಿಸಿದ್ದೇವೆ" 
ಸಧ್ಯ ಇಬ್ಬರೂ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೋಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತದ ಹಲವು ಭಾಗಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬ ಸುದ್ದಿಗಳ ನಡುವೆಯೇ ವಿದ್ಯಾರ್ಥಿಗಳ ಈ ಕೃತ್ಯ ಆತಂಕಕ್ಕೆ  ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com