ಮೂರು ಸಾವಿರ ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಪಡೆದ ರಾಹುಲ್ ಗಾಂಧಿ!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ವಿಶ್ವಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಮೂರು ಸಾವಿರ ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಪಡೆದ ರಾಹುಲ್ ಗಾಂಧಿ!
ಮೂರು ಸಾವಿರ ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಪಡೆದ ರಾಹುಲ್ ಗಾಂಧಿ!
ತಿರುಪತಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ವಿಶ್ವಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. 
ವಿಶೇಷವೆಂದರೆ ಸುಮಾರು 10 ಕಿಲೋಮೀಟರ್ ಉದ್ದದ ಕಡಿದಾದ ಮೆಟ್ಟಿಲನ್ನೇರಿ ರಾಹುಲ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.ದೇವಾಲಯದ ಮುಖ್ಯ ಪ್ರವೇಶದ್ವಾರದಲ್ಲಿ ದೇವಾಲಯ ಆಡಳಿತ ಮಂಡಳಿಯ ಸದಸ್ಯರು ಕಾಂಗ್ರೆಸ್ ಅಧ್ಯಕ್ಷರನ್ನು ಸ್ವಾಗತಿಸಿದ್ದಾರೆ.
ರಾಹುಲ್ ಕೇವಲ ಎರಡು ಗಂಟೆಗಳಲ್ಲಿ ಬೆಟ್ಟವನ್ನು ಏರಿದ್ದಾರೆ. ಅಲಿಪಿರಿಯ;ಲ್ಲಿ ಬೆಟ್ತವೇರಲು ಪ್ರಾರಂಭಿಸಿದ ರಾಹು;ಲ್ ಬೆಟ್ತ ಹತ್ತಿದ ಬಳಿಕ ಭಾರೀ ಕಾವಲಿನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದ ಅತಿಥಿ ಗೃಹದಲ್ಲಿ ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡು ಬಳಿಕ ದೇವಾಲಯಕ್ಕೆ ತೆರಳಿದ್ದರು.
ವೆಂಕಟೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದ ರಾಹುಲ್ ಗಾಂಧಿಗೆ ಅಲ್ಲಿನ ಅರ್ಚಕರು ಪವಿತ್ರ ರೇಷ್ಮೆ ವಸ್ತ್ರ, ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.
ಅವರು ಸುಮಾರು 20 ನಿಮಿಷಗಳ ಕಾಲ ದೇವಸ್ಥಾನದಲ್ಲಿದ್ದರು. ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಬೆಟ್ಟವೇರುವ ಎಲ್ಲೆಡೆ ಬಿಗಿ ಪೋಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಭೇಟಿ ಬಳಿಕ ರಾಹುಲ್ ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ  ಆಯೋಜಿತವಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com