ಫೋಟೋಶೂಟ್ ಮಾಡಿಸಿಕೊಳ್ಳೋ ಪ್ರಧಾನಿ ಬೇಡ! ಮೋದಿ ರಾಜೀನಾಮೆಗೆ ಯಶವಂತ್ ಸಿನ್ಹಾ ಒತ್ತಾಯ

ಪುಲ್ವಾಮಾ ಭಯೋತ್ಪಾದಕ ದಾಳಿ ವೇಳೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡುತಿದ್ದರೆನ್ನುವುದನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಮಾಜಿ ನಾಯಕ....

Published: 22nd February 2019 12:00 PM  |   Last Updated: 22nd February 2019 03:20 AM   |  A+A-


Yashwant Sinha

ಯಶವಂತ ಸಿನ್ಹಾ

Posted By : RHN RHN
Source : PTI
ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ವೇಳೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡುತಿದ್ದರೆನ್ನುವುದನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಮಾಜಿ ನಾಯಕ, ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ ಹೇಳಿದ್ದಾರೆ.

ಭಯೋತ್ಪಾದನೆ ದಾಳಿಯ ನಂತವೂ ಪ್ರಧಾನಿ ಫೋಟೋಶೂಟ್ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗುವುದಾದರೆ ಅಂತಹವರು ಪ್ರಧಾನಿ ಹುದ್ದೆಗೆ ಯೋಗ್ಯರಲ್ಲ, ಮೋದಿ ರಾಜೀನಾಮೆ ಸಲ್ಲಿಸಬೇಕು. ಎಂದು ಸ್ನ್ಹಾ ಹೇಳಿದ್ದಾರೆ.
"ಪುಲ್ವಾಮಾ ದಾಳಿ ನಡೆದ ಫೆ.14ರ ಮಧ್ಯಾಹ್ನ/ಸಂಜೆ ವೇಳೆ ಪ್ರಧಾನಿ ಮೋದಿ ಏನು ಮಾಡುತ್ತಿದ್ದರೆನ್ನುವುದು ಬಹಿರಂಗವಾಗಬೇಕು.ಒಂದು ವೇಳೆ ದಾಳಿಯ ಕುರಿತು ನಿಖರ ಮಾಹಿತಿ ಇದ್ದಿದ್ದರೆ ಹಾಗಿದ್ದೂ ಅವರು ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರೆ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ಯೋಗ್ಯತೆ ಹೊಂದುರುವುದಿಲ್ಲ. ಅವರು ರಾಜೀನಾಮೆ ಸಲ್ಲಿಸಬೇಕು" ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಮೋದಿ ಪಲ್ವಾಮಾ ಅಟ್ಯಾಕ್ ನಂತರ ಡಿಸ್ಕವರಿ ಫಿಲ್ಮ್ ಶೂಟಿಂಗ್ ಮುಂದುವರಿಸಿದ್ದರುಎಂದು ರಾಹುಲ್ ಗಾಂಧಿ ರಿ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಈ ಎಲ್ಲವೂ "ಸುಳ್ಳು ಸುದ್ದಿ" ಎಂದು ಬಿಜೆಪಿ ವಾದಿಸಿದೆ.
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp