ಭಾರತದ ಮೊದಲ ಬುಲೆಟ್​ ಟ್ರೈನ್ ​ಗೆ ಹೆಸರು ಸೂಚಿಸಿ ನಗದು ಬಹುಮಾನ ಗೆಲ್ಲಿ!

ಮುಂಬೈ - ಅಹಮದಾಬಾದ್​ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್​ ಟ್ರೈನ್​ಗೆ ಸೂಕ್ತ ಹೆಸರು ಸೂಚಿಸಿ ನಗದು ಬಹುಮಾನ ಪಡೆಯುವಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮುಂಬೈ - ಅಹಮದಾಬಾದ್​ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್​ ಟ್ರೈನ್​ಗೆ ಸೂಕ್ತ ಹೆಸರು ಸೂಚಿಸಿ ನಗದು ಬಹುಮಾನ ಪಡೆಯುವಂತೆ ಕೇಂದ್ರ ಸರ್ಕಾರ ದೇಶದ ಜನತೆಗೆ ಮುಕ್ತ ಆಹ್ವಾನ ನೀಡಿದೆ.
ಮಾರ್ಚ್​ 25ರೊಳಗೆ ಬುಲೆಟ್​ ರೈಲಿಗೆ ಹೆಸರು ಮತ್ತು ಮಾಸ್ಕಟ್​ ಡಿಸೈನ್​ ಅನ್ನು ನೀಡುವಂತೆ ಹಾಗೂ ಆಯ್ಕೆಯಾದ ಹೆಸರು ಸೂಚಿಸಿದವರಿಗೆ ಮತ್ತು ಮಾಸ್ಕಟ್​ ಡಿಸೈನ್​ ಮಾಡಿದವರಿಗೆ 1 ಲಕ್ಷ ರುಪಾಯಿ ನಗದು ಪುರಸ್ಕಾರ ನೀಡುವುದಾಗಿ ರಾಷ್ಟ್ರೀಯ ಹೈ ಸ್ಪೀಡ್​ ರೈಲ್​ ಕಾರ್ಪೊರೇಷನ್​ ಲಿಮಿಟೆಡ್​ (ಎನ್​ಎಚ್​ಎಸ್​ಆರ್​ಸಿಎಲ್​) ತಿಳಿಸಿದೆ.
ಹೆಸರು ಸೂಚಿಸುವವರು ಕೇಂದ್ರ ಸರ್ಕಾರದ mygov.in ವೆಬ್​ಸೈಟ್​ಗೆ ಭೇಟಿ ನೀಡಿ ತಮ್ಮ ಸಲಹೆಯನ್ನು ನೀಡಬಹುದು. ಮಾಸ್ಕಟ್​ ಡಿಸೈನ್​ ಮಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ರೂ. ಮತ್ತು ಹೆಸರು ಸೂಚಿಸುವ ಸ್ಪರ್ಧೆಯಲ್ಲಿ ಗೆದ್ದವರಿಗೆ 50 ಸಾವಿರ ರೂ ಬಹುಮಾನ ಸಿಗಲಿದೆ. ಜತೆಗೆ ಈ ಎರಡೂ ವಿಭಾಗದಲ್ಲಿ ತಲಾ 10 ಮತ್ತು 5 ಸಾವಿರದ ಸಮಾಧಾನಕರ ಬಹುಮಾನವೂ ದೊರೆಯಲಿದೆ.
2017ರಲ್ಲಿ ಇದೇ ವಿಧದ ಸ್ಪರ್ಧೆಯನ್ನು ಆಯೋಜಿಸಿ ಬುಲೆಟ್​ ರೈಲಿನ ಲೋಗೋವನ್ನು ಆಯ್ಕೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com