ಪ್ರತ್ಯೇಕತಾವಾದಿಗಳಿಗೆ ಭೀತಿ; 12 ಸಾವಿರ ಹೆಚ್ಚುವರಿ ಸಿಬ್ಬಂದಿ ನೇಮಕ, 150 ಮಂದಿ ಬಂಧನ

ಜೆಕೆಎಲ್ಎಫ್ ಅಧ್ಯಕ್ಷ ಮತ್ತು ಜಮಾತ್ ಇ ಇಸ್ಲಾಮಿಯ ಮುಖಂಡ ಸೇರಿದಂತೆ ಸುಮಾರು 150 ಮಂದಿಯನ್ನು ಜಮ್ಮು-ಕಾಶ್ಮೀರ ಸರ್ಕಾರ....
ಪ್ರತ್ಯೇಕತಾವಾದಿಗಳಿಗೆ ಭೀತಿ; 12 ಸಾವಿರ ಹೆಚ್ಚುವರಿ ಸಿಬ್ಬಂದಿ ನೇಮಕ, 150 ಮಂದಿ ಬಂಧನ
ಶ್ರೀನಗರ: ಜೆಕೆಎಲ್ಎಫ್ ಅಧ್ಯಕ್ಷ ಮತ್ತು ಜಮಾತ್ ಇ ಇಸ್ಲಾಮಿಯ ಮುಖಂಡ ಸೇರಿದಂತೆ ಸುಮಾರು 150 ಮಂದಿಯನ್ನು ಜಮ್ಮು-ಕಾಶ್ಮೀರ ಸರ್ಕಾರ ಬಂಧಿಸಿದೆ. ಕಣಿವೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಗೃಹ ಸಚಿವಾಲಯ 12 ಸಾವಿರ ಬಿಎಸ್ಎಫ್ ಮತ್ತು ಐಟಿಬಿಪಿ ಸಿಬ್ಬಂದಿಯನ್ನು ನೇಮಿಸಿದೆ.

ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅರೆಸೇನಾಪಡೆಯ 100 ಹೆಚ್ಚುವರಿ ಪಡೆಗಳನ್ನು ಕಾಶ್ಮೀರದಲ್ಲಿ ನಿಯೋಜನೆ ಮಾಡಲಾಗಿದೆ. ಪ್ರತ್ಯೇಕತಾವಾದಿಗಳಾದ ಯಾಸೂನ್ ಮಲೀಕ್ ಹಾಗೂ ಇನ್ನಿತರರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. 
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬಂಧನವನ್ನು ಸಾಮಾನ್ಯದ ಸಂಗತಿ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದರೂ ಸಹ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಿರುವುದರಿಂದ ಕೇಂದ್ರ ಸರ್ಕಾರ ಬೇರೆಯದ್ದೇ ಆಲೋಚನೆ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಇದೇ ವೇಳೆ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ತನ್ನ ನಾಯಕರ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಶ್ಮೀರದಲ್ಲಿ ಅಸ್ಥಿರತೆ ಉಂಟುಮಾಡಲು ಉತ್ತಮವಾಗಿ ಯೋಜಿಸಿರುವ ಕೃತ್ಯ ಎಂದು ಆರೋಪಿಸಿದೆ.
ಸೇನಾ ಪಡೆಗಳು ಪ್ರತ್ಯೇಕತಾವಾದಿಗಳ ಬಂಧನ ಮಾಡಿರುವುದನ್ನು ನೋಡಿದರೆ ಆರ್ಟಿಕಲ್ 35 ಎ ನ್ನು ರದ್ದುಗೊಳಿಸುವ ಪ್ರಯತ್ನ ನಡೆದಿದೆ ಎನಿಸುತ್ತದೆ, ಇದನ್ನು ಜಮ್ಮು-ಕಾಶ್ಮೀರದ ಜನತೆ ಅದನ್ನು ಒಪ್ಪುವುದಿಲ್ಲ ಎಂದು ಜಮಾತ್ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com