ಜಮ್ಮು-ಕಾಶ್ಮೀರದ ಉಗ್ರರಿಗೆ ಉತ್ತರ ಪ್ರದೇಶದ ಅಮ್ರೋಹಾದಿಂದ ರಾಕೆಟ್ ಲಾಂಚರ್ ಗಳು ಪೂರೈಕೆ!

ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ಎನ್ಐಎ ಪತ್ತೆ ಹಚ್ಚಿದ್ದ ಇಸೀಸ್ ಪ್ರೇರಿತ ಉಗ್ರರ ಜಾಲದಿಂದ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗವಾಗಿದ್ದು,
ಜಮ್ಮು-ಕಾಶ್ಮೀರದ ಉಗ್ರರಿಗೆ ಉತ್ತರ ಪ್ರದೇಶದ ಅಮ್ರೋಹಾದಿಂದ ರಾಕೆಟ್ ಲಾಂಚರ್ ಗಳು ಪೂರೈಕೆ!
ಜಮ್ಮು-ಕಾಶ್ಮೀರದ ಉಗ್ರರಿಗೆ ಉತ್ತರ ಪ್ರದೇಶದ ಅಮ್ರೋಹಾದಿಂದ ರಾಕೆಟ್ ಲಾಂಚರ್ ಗಳು ಪೂರೈಕೆ!
ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ಎನ್ಐಎ ಪತ್ತೆ ಹಚ್ಚಿದ್ದ ಇಸೀಸ್ ಪ್ರೇರಿತ ಉಗ್ರರ ಜಾಲದಿಂದ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗವಾಗಿದ್ದು, ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಉತ್ಪಾದನೆಯಾಗುತ್ತಿದ್ದ ದೇಶಿ ನಿರ್ಮಿತ ರಾಕೆಟ್ ಲಾಂಚರ್ ಗಳು ಶಸ್ತ್ರಾಸ್ತ್ರಗಳು ಭಯೋತ್ಪಾದಕರ ಕೈಗೆ ಸೇರುತ್ತಿದ್ದವು ಎಂದು ತಿಳಿದುಬಂದಿದೆ. 
ಕಳೆದ ತಿಂಗಳು ಎನ್ಐಎ ಉತ್ತರ ಪ್ರದೇಶದಿಂದ 10 ಜನ ಶಂಕಿತ ಭಯೋತ್ಪಾದಕರನ್ನು ಬಂಧಿಸಿತ್ತು. ಈ ಉಗ್ರರು ತನಿಖಾ ಸಂಸ್ಥೆ ಎದುರು ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಪಡಿಸಿದ್ದು, ಉತ್ತರ ಪ್ರದೇಶದಲ್ಲಿ ತಯಾರಾಗುತ್ತಿದ್ದ ಶಸ್ತ್ರಾಸ್ತ್ರಗಳು ಜಮ್ಮು-ಕಾಶ್ಮೀರದ ಉಗ್ರರ ಕೈ ಸೇರುತ್ತಿತ್ತು ಎಂಬುದನ್ನು ತಿಳಿಸಿದ್ದಾರೆ. 
ಬಂಧಿತ ಶಂಕಿತ ಭಯೋತ್ಪಾದಕರಾದ ಸಯೀದ್ ಹಾಗೂ ರೀಸ್ (ಸಹೋದರರು) ರಾಕೆಟ್ ಲಾಂಚರ್ ಗಳನ್ನು ಉತ್ಪಾದಿಸುತ್ತಿದ್ದರು. ಅಮ್ರೋಹಾದ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಇಸ್ಲಾಮಿಕ್ ಧಾರ್ಮಿಕ ಗುರು ಮೊಹಮ್ಮದ್ ಸೊಹೈಲ್ ಈ ಲಾಂಚರ್ ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ದೆಹಲಿ ಮೂಲಕ ಜಮ್ಮು-ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ಹ್ಯಾಂಡಲರ್ ಗಳಿಗೆ ತಲುಪಿಸುತ್ತಿದ್ದ. 
ಇಸ್ಲಾಮಿಕ್ ಧರ್ಮ ಗುರು ಮುಫ್ತಿಯನ್ನು ಅಮ್ರೋಹಾದ ಮದರಸಾದಿಂದ ಡಿಸೆಂಬರ್ 26 ರಂದು ಶಂಕಿತ ಭಯೋತ್ಪಾದಕರ ಜೊತೆಯಲ್ಲಿ ಬಂಧಿಸಲಾಗಿತ್ತು. ರೀಸ್ ಹಾಗೂ ಸಯೀದ್ ಉತ್ಪಾದಿಸುತ್ತಿದ್ದ ರಾಕೆಟ್ ಲಾಂಚರ್ ಗಳು 10,000-12,000 ರೂಪಾಯಿಗಳಿಗೆ ಲಭ್ಯವಾಗುತ್ತಿತ್ತು. ಆದರೆ ಇದನ್ನು ಇಸ್ಲಾಮಿಕ್ ಧಾರ್ಮಿಕ ಗುರು ಮುಫ್ತಿ 20,000-25,000 ರೂಪಾಯಿಗಳಿಗೆ ಖರೀದಿಸಿ ಅದನ್ನು ಭಯೋತ್ಪಾದಕರಿಗೆ 1-1.5 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅಮ್ರೋಹಾದಿಂದ ಶಸ್ತ್ರಾಸ್ತ್ರಗಳನ್ನು ಮತ್ತೋರ್ವ ಶಂಕಿತ ಭಯೋತ್ಪಾದಕ ಇರ್ಶಾದ್ ನ ಸಾಹದಿಂದ ಜಮ್ಮು-ಕಾಶ್ಮೀರಕ್ಕೆ ತಲುಪಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ಮಾಹಿತಿ ಬಹಿರಂಗವಾದ ನಂತರ ಜಮ್ಮು-ಕಾಶ್ಮೀರದ ಭಯೋತ್ಪಾದಕರ ಹ್ಯಾಂಡ್ಲರ್ ಗಳಿಗೂ ಆಮ್ರೋಹಾಗೂ ಸಂಪರ್ಕವಿರುವುದು ಸ್ಪಷ್ಟವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com