ಕಡಲೂರು ಅತ್ಯಾಚಾರ ಪ್ರಕರಣ: ಚರ್ಚ್ ಪಾದ್ರಿಗೆ 30 ವರ್ಷ ಜೈಲು

2014ರಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ತಿತಕುಡಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ....

Published: 07th January 2019 12:00 PM  |   Last Updated: 07th January 2019 07:51 AM   |  A+A-


Cuddalore rape case: Church priest sentenced to 30 years in prison, Rs 5 lakh fine

ಸಾಂದರ್ಭಿಕ ಚಿತ್ರ

Posted By : LSB LSB
Source : The New Indian Express
ಕಡಲೂರು: 2014ರಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ತಿತಕುಡಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಲೂರು ಜಿಲ್ಲಾ ಮಹಿಳಾ ಕೋರ್ಟ್ ಚರ್ಚ್ ಪಾದ್ರಿಗೆ 30 ವರ್ಷ ಹಾಗೂ ಇತರೆ ಒಂಬತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಮಾನವ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ 17 ಆರೋಪಿಗಳ ಪೈಕಿ ಪಾದ್ರಿ ಸೇರಿದಂತೆ 16 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಓರ್ವ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.

ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಮಹಿಳಾ ಕೋರ್ಟ್ ನ್ಯಾಯಾಧೀಶ ಟಿ ಲಿಂಗೇಶ್ವರನ್ ಅವರು, ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಚರ್ಚ್ ಪಾದ್ರಿ ಅರುಲ್ಡೋಸ್ ಅವರಿಗೆ 30 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ.

ಮಾನವ ಕಳ್ಳಸಾಗಣೆಯ ಕಿಂಗ್ ಪಿನ್ ಅನ್ಬಗಳನ್ ಗೆ ಜೀವವಿರುವವರೆಗೆ ಜೈಲು ಶಿಕ್ಷೆ ಹಾಗೂ 3.21 ಲಕ್ಷ ರುಪಾಯಿ ಜೈಲು ಶಿಕ್ಷೆ ವಿಧಿಸಲಾಗಿದೆ. ಅನಂದರಾಜ್ ಗೆ ನಾಲ್ಕು ಜೀವಾವಧಿ ಶಿಕ್ಷೆ, ಸೇಲ್ವರಾಜ್ ಗೆ ಮೂರು ಹಾಗೂ ಮಹೋನ್ ರಾಜ್ ಮತ್ತು ಮತಿವನನ್ ಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಫಾತಿಮಾ ಎಂಬ ಮಹಿಳೆ ಎರಡು ಜೀವಾವಧಿ ಹಾಗೂ ಮಕ್ಕಳನ್ನು ರಾಜ್ಯದ ವಿವಿಧ ಸ್ಥಳಗಳಿಗೆ ಸಾಗಿಸುತ್ತಿದ್ದ ಚಾಲಕ ಶ್ರೀಧರ್ ಗೆ ಎರಡು ಜೀವಾವಧಿ ಶಿಕ್ಷೆ ಮತ್ತು 4.4 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.

ತಿತಿಕುಡಿಯ 13 ವರ್ಷದ ಹಾಗೂ 14 ವರ್ಷದ ಇಬ್ಬರು ಬಾಲಕಿಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಲ್ಲದೆ ಬಾಲಕಿಯರನ್ನು ಸೇಲಂ, ಪನ್ರುತಿ ಹಾಗೂ ವಡಲೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ.
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp