ತೂತುಕುಡಿ ಸ್ಟೆರಿಲೈಟ್ ಘಟಕ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ

ತೂತುಕುಡಿಯಲ್ಲಿರುವ ವೇದಾಂತ ಸ್ಟೆರಿಲೈಟ್ ಘಟಕದ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ತೂತುಕುಡಿ ಸ್ಟೆರಿಲೈಟ್ ಘಟಕ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ
ತೂತುಕುಡಿ ಸ್ಟೆರಿಲೈಟ್ ಘಟಕ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ
ನವದೆಹಲಿ: ತೂತುಕುಡಿಯಲ್ಲಿರುವ ವೇದಾಂತ ಸ್ಟೆರಿಲೈಟ್ ಘಟಕದ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. 
ತಮಿಳುನಾಡು ಸರ್ಕಾರ ವೇದಾಂತ ಸಂಸ್ಥೆಯ ಸ್ಟೆರಿಲೈಟ್ ಘಟಕವನ್ನು ಮುಚ್ಚುವುದರ ಕುರಿತ ನಿರ್ಧಾರವನ್ನು ತಿರಸ್ಕರಿಸಿದ್ದ ಎನ್ ಜಿಟಿ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸ್ಟೆರಿಲೈಟ್ ಘಟಕದ ವಿರುದ್ಧ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದರ ಪರಿಣಾಮ ಕಳೆದ ವರ್ಷದ ಮೇ ತಿಂಗಳಲ್ಲಿ ಸ್ಟೆರಿಲೈಟ್ ಘಟಕವನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ತಮಿಳುನಾಡು ಸರ್ಕಾರ ಮಾಲಿನ್ಯ ಮಂಡಳಿಗೆ ಆದೇಶ ನೀಡಿತ್ತು. 
ಸ್ಟೆರಿಲೈಟ್ ಘಟಕದಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ನಡೆದಿದ್ದ ಬೃಹತ್ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ 13 ಜನರು ಬಲಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com