ಕನ್ಹಯ ಕುಮಾರ್ ಟೀಕಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ: ಶಿವಸೇನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಜಎನ್ ಯು ವಿದ್ಯಾರ್ಥಿ ಮುಖಂಡನಾದ ಕನ್ಹಯ ಕುಮಾರ್ ನನ್ನು ಟೀಕಿಸುವ.....
ಕನ್ಹಯ ಕುಮಾರ್ ಟೀಕಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ: ಶಿವಸೇನೆ
ಕನ್ಹಯ ಕುಮಾರ್ ಟೀಕಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ: ಶಿವಸೇನೆ
ಮುಂಬೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಜೆಎನ್ ಯು ವಿದ್ಯಾರ್ಥಿ ಮುಖಂಡನಾದ ಕನ್ಹಯ ಕುಮಾರ್ ನನ್ನು ಟೀಕಿಸುವ ಯಾವುದೇ ನೈತಿಕ ಹಕ್ಕನ್ನು ಬಿಜೆಪಿ ಹೊಂದಿಲ್ಲ ಎಂದು ಶಿವಸೇನೆ ಹೇಳಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು)ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ ಕುಮಾರ್ ವಿರುದ್ಧ 'ದೇಶವಿರೋಧಿ' ಎಂದು ಆರೋಪಿಸುವ ಬಿಜೆಪಿ ವರ್ತನೆಯನ್ನು ಪ್ರಶ್ನಿಸಿರುವ ಶಿವಸೇನೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮೇಲೆಕೆ ಈ ಆರೋಪ ಹಾಕಲಿಲ್ಲ ಎಂದೂ ಕೇಳಿದೆ.
ಕನ್ಹಯ ಕುಮಾರ್ ವಿರುದ್ಧ ಮಾತನಾಡಿ ರಾಜಕೀಯದ ಮೈಲೇಜ್ ಗಿಟ್ಟಿಸಿಕೊಳ್ಲಲು ಪ್ರಯತ್ನಿಸಬೇಡಿ ಎಂದು ಶಿವಸೇನೆ ಬಿಜೆಪಿಗೆ ತಾಕೀತು ಮಾಡಿದೆ.
ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು "ಹುತಾತ್ಮ" ಎಂದಿದ್ದ ಪಿಡಿಪಿ ಮುಖ್ಯಸ್ಥೆ ಮುಫ್ತಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಪಾಪಕೃತ್ಯವೆಸಗಿದೆ ಎಂದು ಶಿವಸೇನೆ ತನ್ನ ಮುಖವಾಣಿ "ಸಾಮ್ನಾ" ಪತ್ರಿಕಾ ಸಂಪಾದಕೀಯದಲ್ಲಿ ಹೇಳಿದೆ.
ಅಫ್ಜಲ್ ಗುರುವಿನಂತಹಾ ಭಯೋತ್ಪಾದಕರನ್ನು ಮಣ್ಣಿನ ಮಕ್ಕಳು ಎಂದಿದ್ದ ಮುಫ್ತಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಕೇವಲ ಕನ್ಹಯ ಮೇಲೇಕೆ ಪ್ರಕರಣ ದಾಖಲಿಸಿದ್ದೀರಿ? ಎಂದು ಶಿವಸೇನೆ ಪ್ರಶ್ನೆ ಹಾಕಿದೆ.
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯಲ್ಲಿ 2016ರ ಫೆಬ್ರವರಿಯಲ್ಲುಇ "ದೇಶದ್ರೋಹ"ದ ಕಾರ್ಯಕ್ರಮ ಆಯೋಜಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಕನ್ಹಯ ಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಹಾಗೂ ಇತರೆ ಏಳು ಜನರ ಮೇಲೆ ಪೋಲೀಸರು ಆರೋಪ ದಾಖಲಿಸಿದ್ದಾರೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com