'ಹೌ ಇಸ್ ದಿ ಜೋಷ್': ಚಿತ್ರೋದ್ಯಮಕ್ಕೆ ಪ್ರಧಾನಿ ಮೋದಿ ಪ್ರಶ್ನೆ; 'ಜೋರಾಗಿಯೇ ಇದೆ ಸರ್' ಎಂಬ ಪ್ರತಿಕ್ರಿಯೆ

ಹೌ ಇಸ್ ದಿ ಜೋಷ್? ಉರಿ ಚಿತ್ರದ ಈ ಡೈಲಾಗ್ ಈಗ ದೇಶಾದ್ಯಂತ ಜನಪ್ರಿಯ. ಮುಂಬೈ ನಲ್ಲಿ ನ್ಯಾಷನಲ್ ಮ್ಯೂಸಿಯಮ್ ಯನ್ನು ಉದ್ಘಾಟನೆ ಮಾಡಿದ ಪ್ರಧಾನಿಯೂ ಸಹ ಇದೇ ಪ್ರಶ್ನೆಯನ್ನು ಕೇಳಿದ್ದು, ಅಲ್ಲಿ ನೆರೆದಿದ್ದ
'ಹೌ ಇಸ್ ದಿ ಜೋಷ್': ಚಿತ್ರೋದ್ಯಮಕ್ಕೆ ಪ್ರಧಾನಿ ಮೋದಿ ಪ್ರಶ್ನೆ; 'ಜೋರಾಗಿಯೇ ಇದೆ ಸರ್' ಎಂಬ ಪ್ರತಿಕ್ರಿಯೆ
'ಹೌ ಇಸ್ ದಿ ಜೋಷ್': ಚಿತ್ರೋದ್ಯಮಕ್ಕೆ ಪ್ರಧಾನಿ ಮೋದಿ ಪ್ರಶ್ನೆ; 'ಜೋರಾಗಿಯೇ ಇದೆ ಸರ್' ಎಂಬ ಪ್ರತಿಕ್ರಿಯೆ
ಹೌ ಇಸ್ ದಿ ಜೋಷ್? ಉರಿ ಚಿತ್ರದ ಈ ಡೈಲಾಗ್ ಈಗ ದೇಶಾದ್ಯಂತ ಜನಪ್ರಿಯ. ಮುಂಬೈ ನಲ್ಲಿ ನ್ಯಾಷನಲ್ ಮ್ಯೂಸಿಯಮ್ ಯನ್ನು ಉದ್ಘಾಟನೆ ಮಾಡಿದ ಪ್ರಧಾನಿಯೂ ಸಹ ಇದೇ ಪ್ರಶ್ನೆಯನ್ನು ಕೇಳಿದ್ದು, ಅಲ್ಲಿ ನೆರೆದಿದ್ದ ಚಿತ್ರೋದ್ಯಮ ಫುಲ್ ಜೋಷ್ ನಲ್ಲಿಯೇ ಪ್ರತಿಕ್ರಿಯೆ ನೀಡಿದೆ. 
ಪ್ರಧಾನಿಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಚಿತ್ರೋದ್ಯಮ ಜೋಷ್ ಜೋರಾಗಿಯೇ ಇದೆ( ಹೈ ಸರ್) ಎಂದು ಹೇಳಿದೆ. ಉರಿ ಸಿನಿಮಾದ ಬಗ್ಗೆಯೇ  ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಕೇಳಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಹಿಂದೊಮ್ಮೆ ಅಸಹಾಯಕತೆಯನ್ನೇ ಕೇಂದ್ರೀಕರಿಸಿಕೊಂಡಿದ್ದ ಭಾರತೀಯ ಸಿನಿಮಾಗಳು ಈಗ ಬದಲಾವಣೆಯಾಗುತ್ತಿದೆ. ಸಿನಿಮಾಗಳು ಸಮಾಜದ ಪ್ರತಿಬಿಂಬ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಈಗ ಸಮಸ್ಯೆಗಳೊಂದಿಗೆ ಪರಿಹಾರಗಳನ್ನೂ ನೋಡಲಾಗುತ್ತಿದೆ. ಲಕ್ಷ ಸಮಸ್ಯೆಗಳಿದ್ದರೆ ಅದಕ್ಕೆ ಕೋಟ್ಯಂತರ ಪರಿಹಾರವೂ ಇರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಚಿತ್ರರಂಗದ ಬಲವರ್ಧನೆಯನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com