ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ, ನಾನಾಜಿ ದೇಶಮುಖ್ ಗೆ 'ಭಾರತ ರತ್ನ' ಘೋಷಣೆ

ಕೇಂದ್ರ ಸರ್ಕಾರ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಹಾಗೂ ಸಮಾಜ ಸೇವಕ ನಾನಾಜಿ ದೇಶಮುಖ್ ಅವರಿಗೆ...
ನಾನಾಜಿ ದೇಶಮುಖ್ -  ಪ್ರಣಬ್ ಮುಖರ್ಜಿ- ಭೂಪೇನ್ ಹಜಾರಿಕಾ
ನಾನಾಜಿ ದೇಶಮುಖ್ - ಪ್ರಣಬ್ ಮುಖರ್ಜಿ- ಭೂಪೇನ್ ಹಜಾರಿಕಾ
ನವದೆಹಲಿ: ಕೇಂದ್ರ ಸರ್ಕಾರ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಹಾಗೂ ಸಮಾಜ ಸೇವಕ ನಾನಾಜಿ ದೇಶಮುಖ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತ ರತ್ನ' ನೀಡಿ ಗೌರವಿಸಿದೆ.
70ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ಸೇರಿದಂತೆ ಮೂವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ್ದು, ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡಿದ್ದ ನಾನಾಜಿ ದೇಶಮುಖ್ ಹಾಗೂ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ.
ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಿದ್ಧಗಂಗಾ ಶ್ರೀಗಳಿಗೆ ಸಿಗಲಿಲ್ಲ ‘ಭಾರತ ರತ್ನ’
ಇತ್ತೀಚೆಗೆಷ್ಟೇ ಶಿವೈಕ್ಯರಾದ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಲೇಬೇಕೆಂದು ಕರ್ನಾಟಕದಾದ್ಯಂತ ಭಾರಿ ಆಗ್ರಹಗಳು ಕೇಳಿಬಂದಿದ್ದವು. ಆದರೆ ಇದೀಗ ಕರ್ನಾಟಕದ ಕೋಟ್ಯಂತರ ಮಂದಿಯ ನಿರೀಕ್ಷೆ ಹುಸಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com