1 ಲಕ್ಷ ರೂ ನಗದು ಇದ್ದ ಬ್ಯಾಗ್ ನ್ನು ಮಾಲಿಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ!

ಒಂದು ಲಕ್ಷ ರೂಪಾಯಿ ನಗದು ಸೇರಿದಂತೆ ಹಲವು ಮುಖ್ಯ ವಸ್ತುಗಳಿದ್ದ ಬ್ಯಾಗ್ ನ್ನು ಮಾಲಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
1 ಲಕ್ಷ ರೂ ನಗದು ಇದ್ದ ಬ್ಯಾಗ್ ನ್ನು ಮಾಲಿಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ!
1 ಲಕ್ಷ ರೂ ನಗದು ಇದ್ದ ಬ್ಯಾಗ್ ನ್ನು ಮಾಲಿಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ!
ಬೆಂಗಳೂರು: ಒಂದು ಲಕ್ಷ ರೂಪಾಯಿ ನಗದು ಸೇರಿದಂತೆ ಹಲವು ಮುಖ್ಯ ವಸ್ತುಗಳಿದ್ದ ಬ್ಯಾಗ್ ನ್ನು ಮಾಲಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 
ಸುಭದ್ರಾ ಎಂಬ ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರು  1 ಲಕ್ಷ ರೂಪಾಯಿ ನಗದು, ಹಾಲ್ ಟಿಕೆಟ್, ಆಧಾರ್ ಕಾರ್ಡ್, ಎಟಿಎಂ ಇರುವ ಬ್ಯಾಗ್ ನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. 
ರೈಲ್ವೆ ಸೆಲೆಕ್ಷನ್ ಪರೀಕ್ಷೆಯನ್ನು ಬರೆಯುವುದಕ್ಕಾಗಿ ಸುಭ್ರದ್ರಾ ಎಂಬುವವರು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಎಸ್ಟೀಂ ಮಾಲ್ ಗೆ ವಜ್ರ ಬಸ್ ನಲ್ಲಿ ಬಂದಿದ್ದ ಆಕೆ ಬ್ಯಾಗ್ ನ್ನು ಮರೆತಿದ್ದರು. ಬಸ್ ನಿರ್ವಾಹಕ ಯೆಲ್ಲಪ್ಪ ಬಟಗೇರಿ ಹಾಗೂ ಚಾಲಕ ಶಿವಕುಮಾರ್ ಗೆ ಈ ಮಾಹಿತಿ ಡಿಪೋ ಇಂದ ಗೊತ್ತಾಗಿದೆ.  ಅದನ್ನು ಮಹಿಳೆಗೆ ತಲುಪಿಸಿದ್ದು, ಪ್ರಾಮಾಣಿಕತೆ ಮೆರೆದಿದ್ದಾರೆ.  ಸಮಯಕ್ಕೆ ಸರಿಯಾಗಿ ಬ್ಯಾಗ್ ನ್ನು ತಲುಪಿಸಿರುವ ಚಾಲಕ, ನಿರ್ವಾಹಕರಿಗೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com