ಗಡ್ಕರಿ ಹೇಳಿಕೆ ಪ್ರಧಾನಿ ವೈಫಲ್ಯದ ಬಗ್ಗೆ ಬಿಜೆಪಿಯೊಳಗಿನ ಅಸಮಾಧಾನದ ಪ್ರತಿಬಿಂಬ- ಎನ್ ಸಿಪಿ

ನಿತಿನ್ ಗಡ್ಕರಿ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿಯೊಳಗೆ ಇರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಎನ್ ಸಿಪಿ- ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹೇಳಿಕೆ ನೀಡಿದೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಮುಂಬೈ: ಭರವಸೆ ಈಡೇರಿಸದ ನಾಯಕರನ್ನು ಜನರೇ ಶಿಕ್ಷಿಸುತ್ತಾರೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿಯೊಳಗೆ ಇರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಎನ್ ಸಿಪಿ- ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹೇಳಿಕೆ ನೀಡಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕರಾಗಿ ರೂಪುಗೊಳ್ಳಲು ಗಡ್ಕರಿ ಪ್ರಯತ್ನಿಸುತ್ತಿದ್ದಾರೆ ಎಂದು  ಎನ್ ಸಿಪಿ ರಾಷ್ಟ್ರೀಯ ವಕ್ತಾರ ನವಾಜ್ ಮಲ್ಲಿಕ್ ಹೇಳಿದ್ದಾರೆ.

ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಡ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಗಡ್ಕರಿ ಇಂತಹ ಹೇಳಿಕೆ ನೀಡುತ್ತಿದ್ದು, ಲೋಕಸಭಾ ಚುನಾವಣೆ ನಂತರ ಬಿಜೆಪಿ ಸರ್ಕಾರವೂ ಇರುವುದಿಲ್ಲ, ಮೋದಿ ಕೂಡಾ ಇರುವುದಿಲ್ಲ ಎಂದು ಮಲ್ಲಿಕ್ ಭವಿಷ್ಯ ನುಡಿದಿದ್ದಾರೆ.

ಹಿಂದಿ ಭಾಷಿಕರೇ ಹೆಚ್ಚಾಗಿರುವ ಮೂರು ರಾಜ್ಯಗಳಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಎನ್ ಸಿಪಿ ಮೈತ್ರಿ ಪಕ್ಷ ಕಾಂಗ್ರೆಸ್  ಗೆಲುವು ಸಾಧಿಸಿದ್ದು,  ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು.
ಕೆಲವು ಕಡೆಗಳಲ್ಲಿ ಬಿಜೆಪಿಯೊಳಗೆ ಮೋದಿ ವೈಫಲ್ಯದ ಬಗ್ಗೆ ಧ್ವನಿ ಕೇಳಿಬಂದಿತ್ತು. ಬಿಜೆಪಿ ಸೋತ ನಂತರ ಗಡ್ಕರಿ ಮೋದಿಗೆ ತಾವೇ ಪರ್ಯಾಯ ಎಂಬಂತೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮಲ್ಲಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com