ಅಯೋಧ್ಯೆ ವಿವಾದವನ್ನು ಕಾಶ್ಮೀರ ಸಮಸ್ಯೆಯಂತಾಗಿಸಬೇಡಿ: ಕೇಂದ್ರ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ

ಅಯೋಧ್ಯೆ ವಿವಾದವನ್ನು ಕಾಶ್ಮೀರ ವಿಚಾರದಂತೆ ಸಂಕೀರ್ಣಗೊಳಿಸಬಾರದು. ಕಾಶ್ಮೀರ ವಿವಾದ ಇನ್ನೂ ಬಗೆಹರಿಯಂದಾಗಿದೆ ಎಂದು ಶಿವಸೇನೆ ಹೇಳಿದೆ.
ಅಯೋಧ್ಯೆ ವಿವಾದವನ್ನು ಕಾಶ್ಮೀರ ಸಮಸ್ಯೆಯಂತಾಗಿಸಬೇಡಿ: ಕೇಂದ್ರ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ
ಅಯೋಧ್ಯೆ ವಿವಾದವನ್ನು ಕಾಶ್ಮೀರ ಸಮಸ್ಯೆಯಂತಾಗಿಸಬೇಡಿ: ಕೇಂದ್ರ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ
ಮುಂಬೈ: ಅಯೋಧ್ಯೆ ವಿವಾದವನ್ನು ಕಾಶ್ಮೀರ ವಿಚಾರದಂತೆ ಸಂಕೀರ್ಣಗೊಳಿಸಬಾರದು. ಕಾಶ್ಮೀರ ವಿವಾದ ಇನ್ನೂ ಬಗೆಹರಿಯದಂತಾಗಿದೆ ಎಂದು ಶಿವಸೇನೆ ಹೇಳಿದೆ.

ನ್ಯಾಯಮೂರ್ತಿಗಳು ಪ್ರಕರಣವನ್ನುವಿಚಾರಣೆಗೊಳಪಡಿಸಿ ಬೇಗ ತಿರ್ಮಾನ ನಿಡಬೇಕೆಂದು ಕಾಯುವುದಕ್ಕಿಂತ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಹಾಗು ಪ್ರಧಾನಮಂತ್ರಿ ಮತ್ತು ಇತರ ಬಿಜೆಪಿ ನಾಯಕರು ತಾವೇ ಏಕೆ ಮಂದಿರ ನಿರ್ಮಾಣ ವಿಳಂಬಕ್ಕಾಗಿ ಜವಾಬ್ದಾರಿ ಹೊರುತ್ತಿಲ್ಲ ಎಂದೂ ಶಿವಸೇನೆ ಪ್ರಶ್ನಿಸಿದೆ.

"ರಾಮ ಮಂದಿರ ನಿರ್ಮಾಣ ಎಂಬುದನ್ನು ಜಮ್ಮು ಕಾಶ್ಮೀರ ಸಮಸ್ಯೆಯಂತೆ ಸಂಕೀರ್ಣಗೊಳಿಸಬಾರದು ಕಾಶ್ಮೀರ ಸಮಸ್ಯೆಗೆ ಸದ್ಯದ ಭವಿಷ್ಯದಲ್ಲಿ ಯಾವುದೇ ಉತ್ತಮ ಪರಿಹಾರ ಕಾಣಿಸುತ್ತಿಲ್ಲ. ಅಯೋಧ್ಯೆ ವಿಚಾರದಲ್ಲಿ ಹಾಗಾಗಬಾರದು" ಎಂದು ಶಿವಸೇನೆ ತನ್ನ ಮುಖವಾಣಿ "ಸಾಮ್ನಾ" ಸಂಪಾದಕೀಯ ಲೇಖನದಲ್ಲಿ ತಿಳಿಸಿದೆ.

ಮಂದಿರ ನಿರ್ಮಾಣ ಸ್ಥಗಿತವಾಗಲು ಕಾಂಗ್ರೆಸ್ ಕಾರಣ ಎಂದು ಕೈ ಪಕ್ಷದತ್ತ ಬೆಟ್ಟು ತೋರಿಸುವುದನ್ನು ಬ್ಜೆಪಿ ಮೊದಲು ನಿಲ್ಲಿಸಬೇಕು.ಶಿವಸೇನೆ ತಾಕೀತು ಮಾಡಿದೆ ಮಂದಿರ ನಿರ್ಮಾಣದ ಸಂಬಂಧ ದಿನದಿನಕ್ಕೆ ಒತ್ತಡ ಹೆಚ್ಚುತ್ತಿರುವಂತೆ ಮೋದಿ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ವಿವಾದಾಸ್ಪದ ಜಾಗದ ಸುತ್ತಮುತ್ತ ವಶಕ್ಕೆ ಪಡೆಯಲಾದ ವಿವಾದಾಸ್ಪದ ಅಲ್ಲದ ಭೂಮಿಯನ್ನು ಅದರ ಮಾಲೀಕರಿಗೆ ಹಿಂತಿರುಗಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ಇದೇ ಪರಿಹಾರವಾಗಿದ್ದಿದ್ದರೆ ಕಳ್ರೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಇದನ್ನೇಕೆ ಪರಿಗಣಿಸಿರಲಿಲ್ಲ ಎಂದು ಉದ್ಭವ್ ಠಾಕ್ರೆ ನೇತೃತ್ವದ ಪಕ್ಷ ಪ್ರಶ್ನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com