ಗುರ್ದಾಸ್ ಪುರಕ್ಕೆ ತನ್ನ ಪ್ರತಿನಿಧಿಯನ್ನು ನೇಮಿಸಿದ ಸಂಸದ ಸನ್ನಿ ಡಿಯೋಲ್: ವ್ಯಾಪಕ ಟೀಕೆ

ಬಾಲಿವುಟ್ ನಟ, ಸಂಸದ ಸನ್ನಿ ಡಿಯೋಲ್ ಬರಹಗಾರರೊಬ್ಬರನ್ನು ಗುರ್ದಾಸ್ ಪುರಕ್ಕೆ ತಮ್ಮ ಪ್ರತಿನಿಧಿಯನ್ನಾಗಿ ನೇಮಕ ಮಾಡಿ ಸುದ್ದಿಯಾಗಿದ್ದಾರೆ.

Published: 02nd July 2019 12:00 PM  |   Last Updated: 02nd July 2019 06:30 AM   |  A+A-


Sunny Deol appoints 'representative' to Gurdaspur constituency, Congress terms it 'betrayal'

ಗುರ್ದಾಸ್ ಪುರಕ್ಕೆ ತನ್ನ ಪ್ರತಿನಿಧಿಯನ್ನು ನೇಮಿಸಿದ ಸಂಸದ ಸನ್ನಿ ಡಿಯೋಲ್: ವ್ಯಾಪಕ ಟೀಕೆ

Posted By : SBV SBV
Source : Online Desk
ನವದೆಹಲಿ: ಬಾಲಿವುಟ್ ನಟ, ಸಂಸದ ಸನ್ನಿ ಡಿಯೋಲ್ ಬರಹಗಾರರೊಬ್ಬರನ್ನು ಗುರ್ದಾಸ್ ಪುರಕ್ಕೆ ತಮ್ಮ ಪ್ರತಿನಿಧಿಯನ್ನಾಗಿ ನೇಮಕ ಮಾಡಿ ಸುದ್ದಿಯಾಗಿದ್ದಾರೆ. 

ಸನ್ನಿ ಡಿಯೋಲ್ ನಡೆಗೆ ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮತದಾರಿಗೆ ಸನ್ನಿ ಡಿಯೋಲ್ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಗುರ್ದಾಸ್ ಪುರದಲ್ಲಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೆ ಸಂಸದ ಸನ್ನಿ ಡಿಯೋಲ್ ಗುರ್ ಪ್ರೀತ್ ಸಿಂಗ್ ಪಲ್ಹೇರಿ ಎಂಬುವವರನ್ನು ಸಂಸದರ ಪ್ರತಿನಿಧಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.  

ಪಲ್ಹೇರಿ ಬರಹಗಾರರಾಗಿದ್ದು, ಸನ್ನಿ ಡಿಯೋಲ್ ಇವರನ್ನು ತಮ್ಮ ಪ್ರತಿನಿಧಿಯಾಗಿ ನೇಮಕ ಮಾಡಿ ಜೂ.26 ರಂದು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸನ್ನಿ ಡಿಯೋಲ್ ಸ್ಥಳೀಯ ವಿಷಯಗಳಿಗಳ ಮೇಲೆ ಗಮನ ಹರಿಸಲು ತಮ್ಮ ಪ್ರತಿನಿಧಿಯನ್ನು ನೇಮಕ ಮಾಡಿದ್ದು, ತಮ್ಮ ಪ್ರತಿನಿಧಿಯನ್ನು ಗುರ್ದಾಸ್ ಪುರದ ಜನತೆಗೆ 24 ಗಂಟೆಗಳೂ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp