ಲೋಕಸಭೆ: ವೈದ್ಯರಿಗೆ ಭದ್ರತೆ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಹೇಮಾ ಮಾಲಿನಿ

ವೈದ್ಯರಿಗೆ ಭದ್ರತೆ ಸಮಸ್ಯೆ ಬಗ್ಗೆ ಬಿಜೆಪಿ ಸಂಸದೆ ಹೇಮಾ ಮಾಲಿನಿ ಲೋಕಸಭೆಯಲ್ಲಿಂದು ಧ್ವನಿ ಎತ್ತಿದ್ದಾರೆ.ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ತರಬೇಕಾಗಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೇಮಾ ಮಾಲಿನಿ
ಹೇಮಾ ಮಾಲಿನಿ
ನವದೆಹಲಿ: ವೈದ್ಯರಿಗೆ ಭದ್ರತೆ ಸಮಸ್ಯೆ ಬಗ್ಗೆ ಬಿಜೆಪಿ ಸಂಸದೆ ಹೇಮಾ ಮಾಲಿನಿ ಲೋಕಸಭೆಯಲ್ಲಿಂದು ಧ್ವನಿ ಎತ್ತಿದ್ದಾರೆ.
 ದೇಶದಲ್ಲಿನ ವಿವಿಧ ಕಡೆಗಳಲ್ಲಿ ಆಸ್ಪತ್ರೆಯಲ್ಲಿನ ವೈದ್ಯರ ಮೇಲೆ ಹೇಯ ದಾಳಿ ಆಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಹಲ್ಲೆಯನ್ನು ಖಂಡಿಸಿ ಜೂನ್ 17 ರಂದು ಸುಮಾರು 8 ಲಕ್ಷ ವೈದ್ಯರು ಸೇವೆಯನ್ನು ಬಹಿಷ್ಕರಿಸಿ ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಸಿದ್ದಾರೆ. ರೋಗಿಗಳನ್ನು ರಕ್ಷಿಸುವ ವೈದ್ಯರು ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು.
ವೈದ್ಯರು ದೇಶದ ಸಂಪತ್ತಾಗಿದ್ದು, ನಮ್ಮ ಸೂಪರ್ ಹಿರೋ ಆಗಿದ್ದಾರೆ. ವೈದೋ ಹರಿ ಎಂಬ ನಂಬಿಕೆ ಹೊಂದಿದ್ದೇವೆ. ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ತರಬೇಕಾಗಿದೆ. ವೈದ್ಯರ ಮೇಲೆ ಹಲ್ಲೆ ಮಾಡುವವರನ್ನು ಕಪ್ಪು ಪಟ್ಟಿಗೆ ಸೇರಿಸುವ ಕಾನೂನನ್ನು ಜಾರಿಗೆ ತರಬೇಕಾಗಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸೌಕರ್ಯಗಳಿಂದ ತಪ್ಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. 
ನಟಿ ಹಾಗೂ ರಾಜಕಾರಣಿಯಾಗಿರುವ ಹೇಮಮಾಲಿನಿ ಶೇ, 39 ರಷ್ಟು ಸಂಸತ್ತಿನಲ್ಲಿ ಹಾಜರಿದ್ದು, 210 ಪ್ರಶ್ನೆಗಳನ್ನು ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com